

ಅಂಕೋಲಾ: ತಾಲೂಕಿನ ಹೊಸಗದ್ದೆಯ ಜನತಾ ಕಾಲನಿಯಲ್ಲಿರುವ ಮಹಾಗಣಪತಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಭಜನಾ ಸಪ್ತಾಹದೊಂದಿಗೆ ವಾರ್ಷಿಕ ವರ್ಧಂತಿ ಉತ್ಸವ ಫೆ. 23ರಂದು ಜರುಗಲಿದೆ.
ಅಂದು ಬೆಳಗ್ಗೆ 8:30ಕ್ಕೆ ಗಣಪತಿ ಪೂಜೆಯೊಂದಿಗೆ ಪ್ರಾರಂಭಿಸಿ ಪೂಣ್ಯಾಹದೇವನಾಂದಿ, ಕಂಕಣಧಾರಣೆ, ಮಂಡಲ ದರ್ಶನ, ಕಳಸ ಸ್ಥಾಪನೆ, ಯಾಗಶಾಲಾ ಪ್ರವೇಶ, ಶ್ರೀ ದೇವರ ಕಲಾವೃದ್ಧಿ ಹೋಮ ಹಾಗೂ ಗಣಹೋಮ ನಡೆಯಲಿದೆ.
ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ಉನ್ಮತ ವಿನಾಯಕ ಹೋಮ, ನಂತರ ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಅಂದು ರಾತ್ರಿ ಭಜನಾ ಸಪ್ತಾಹದ ಸಂಪನ್ನಗೊಳ್ಳಲಿದೆ.
ಬಳಿಕ ಬಿ.ಎಲ್. ಇವೆಂಟ್ಸ್ ಪೊ›ಡಕ್ಷನ್ ಅವರ ಸಾರಥ್ಯದಲ್ಲಿ ಜನತಾ ಉತ್ಸವ -2025 ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಮಹಾಗಣಪತಿ ದೇವಸ್ಥಾನ ಭಜನಾ ಸಪ್ತಾಹ ವರ್ಧಂತಿ ಉತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.