ಹೊಸಗದ್ದೆ ಬಳಿ ಯುವತಿ ಶವ ಪತ್ತೆ

16sdp3(Akshata Hirematt)
Published on

ಸಿದ್ದಾಪುರ: ತಾಲೂಕಿನ ಹೆಗ್ಗರಣಿ ಸಮೀಪದ ಕೋಡನಮನೆ ಹಳ್ಳಕ್ಕೆ ಬುಧವಾರ ಸಂಜೆ ಬಿದ್ದ ಕಾರಿನಲ್ಲಿದ್ದ ಹುಬ್ಬಳ್ಳಿ ಕೇಶ್ವಾಪುರದ ಯುವತಿ ಅಕ್ಷತಾ ಸಿದ್ದಯ್ಯ ಹಿರೇಮಠ (22) ಮೃತದೇಹ ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದೆ.

ಉಂಚಳ್ಳಿ ಜೋಗ ಪ್ರವಾಸಕ್ಕೆಂದು ಕಾರಿನಲ್ಲಿ ನಾಲ್ವರು ಬಂದಿದ್ದರು. ವಾಪಸ್ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಕೋಡನಮನೆ ಹಳ್ಳಕ್ಕೆ ಬಿದ್ದು ಅಪಘಾತ ಸಂಭವಿಸಿತ್ತು.

ಕಾರಿನಲ್ಲಿದ್ದ ಹುಬ್ಬಳ್ಳಿಯ ನಿಶ್ಕಿಲ್, ರೋನ್ವಿತ್ ಹಾಗೂ ಸುಷ್ಮಾ ಅವರ ಮೃತದೇಹ ಗುರುವಾರ ಕಾರಿನಲ್ಲಿಯೇ ಪತ್ತೆಯಾಗಿದ್ದವು. ಆದರೆ, ಅಕ್ಷತಾ ಹಿರೇಮಠ ನೀರಿನಲ್ಲಿ ತೇಲಿ ಹೋಗಿರುವ ಶಂಕೆ ವ್ಯಕ್ತವಾಗಿತ್ತು. ಸಿದ್ದಾಪುರ ಠಾಣೆಯ ಸಿಪಿಐ ಪ್ರಕಾಶ ಹಾಗೂ ಪಿಎಸ್​ಐ ಮಂಜುನಾಥ ರ್ಬಾ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ, ಸಿದ್ದಾಪುರ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಶೋಧ ಕಾರ್ಯ ನಡೆಸಿದರು. ಕಾರು ಸಿಕ್ಕಿದ ಸ್ಥಳದಿಂದ ಅಂದಾಜು ಒಂದೂವರೆ ಕಿ.ಮೀ. ದೂರದಲ್ಲಿ (ಹೊಸಗದ್ದೆ) ಮರದ ಬೇರಿಗೆ ಶವ ಸಿಲುಕಿಕೊಂಡಿತ್ತು.

ಅಕ್ಷತಾ ಹಿರೇಮಠ ವಾಯವ್ಯ ರಸ್ತೆ ಸಾರಿಗೆ ನೌಕರರ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಎಸ್.ಬಿ. ಹಿರೇಮಠ ಅವರ ಪುತ್ರಿ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net