

ಎಂ.ಎನ್.ಕೋಟೆ: ಗುಬ್ಬಿ ತಾಲೂಕು ಹೊಸಕೆರೆ ಡೇರಿ ಅಧ್ಯಕ್ಷ ಹಾಗೂ ಸಂದ ನಿವೃತ್ತ ಕಾರ್ಯದರ್ಶಿ ಮನಸೋ ಇಚ್ಛೆ ಅಧಿಕಾರ ನಡೆಸುತ್ತಿದ್ದಾರೆ ಎಂದು ಡೇರಿ ಉಪಾಧ್ಯಕ್ಷ ಹಾಗೂ ಸದಸ್ಯರು ಆರೋಪಿಸುತ್ತಿದ್ದಾರೆ.
ಡೇರಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಭೂಮಿರಾಜು ಮಾತನಾಡಿ, ಡೇರಿ ಮಾಜಿ ಕಾರ್ಯದರ್ಶಿ ಎಚ್.ಡಿ.ನಾರಾಯಣಮೂರ್ತಿ 47 ವರ್ಷಗಳಿಂದ ಕಾರ್ಯದರ್ಶಿಯಾಗಿ ಸರ್ವಾಧಿಕಾರಿಯಂತೆ ಅಧಿಕಾರ ಚಲಾಯಿಸಿ, ಸಂಘಕ್ಕೆ ವಂಚಿಸಿ, ಇತ್ತೀಚೆಗೆ ಸ್ವಯಂ ನಿವೃತ್ತಿಗೆ ತೆಗೆದುಕೊಂಡಿದ್ದರೂ ಕಾರ್ಯದರ್ಶಿ ಹುದ್ದೆಗೆ ಮಗನನ್ನು ಖಾಯಂಗೊಳಿಸಲು ಕಸರತ್ತು ನಡೆಸುತ್ತಿದ್ದಾರೆ. ಡೇರಿ ಸಮಿತಿಯು ಸಹ ನಾರಾಯಣಮೂರ್ತಿ ಅವರ ಮಗನನ್ನೇ ಕಾರ್ಯದರ್ಶಿಯನ್ನಾಗಿ ತಾತ್ಕಾಲಿಕವಾಗಿ ನೇಮಿಸಿದೆ. ಆತನನ್ನೇ ಖಾಯಂ ಮಾಡಲು ನಿರ್ದೇಶಕರಿಗೆ ತಿಳಿಸದೆ ಅಧ್ಯಕ್ಷ ಜಯಣ್ಣ, ಸಹಕಾರಿ ಸಂಗಳ
ಸಹಾಯಕ ನಿಬಂಧಕ ಓಬಳೇಶ್ ಮುಂದಾಗಿದ್ದಾರೆ.
ಏ.29ರಂದು ಸಂಘದ ಆವರಣದಲ್ಲಿ ಕರೆಯಲಾಗಿದ್ದ ಮಂಡಳಿಯ ಸಭೆಯಲ್ಲಿ ಈ ಹಿಂದಿನ ಸಭೆಯ ನಡಾವಳಿಗಳ ಬಗ್ಗೆ ಚರ್ಚಿಸುವಾಗ, ಹಳೇ ತೀಮಾರ್ನಗಳನ್ನು ರದ್ದುಗೊಳಿಸುವಂತೆ ಬಹುಮತದ ಸದಸ್ಯರು ಒತ್ತಾಯಿಸಿದಾಗ, ಅಧ್ಯಕ್ಷರು ಹಾಗೂ ಪ್ರಭಾರ ಕಾರ್ಯದರ್ಶಿ ಸಂಘದ ನಡಾವಳಿ ಪುಸ್ತಕ ಸಮೇತ ಸಭೆಯಿಂದ ಎದ್ದು ಹೋದರು. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಚೇಳೂರು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮೇಲಧಿಕಾರಿಗಳು ನಾರಾಯಣ ಮೂರ್ತಿ ಅವರ ಪುತ್ರ, ಡೇರಿ ಪ್ರಭಾರ ಕಾರ್ಯದರ್ಶಿ ಸುನಿಲ್ನನ್ನು ಈ ಕೂಡಲೇ ಕಾರ್ಯದರ್ಶಿ ಸ್ಥಾನದಿಂದ ವಜಾಗೊಳಿಸಬೇಕು ಎಂದರು.
ಮಾಜಿ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ಡೇರಿ ನಷ್ಟದಲ್ಲಿರಲು ಸಹಕಾರ ಸಂಘಗಳ ಸಹಾಯಕ ನಿಬಂಧಕ ಓಬಳೇಶ್ನೇ ಕಾರಣ. ಓಬಳೇಶ್ ಅವರ ಕುಮ್ಮಕ್ಕಿನಿಂದ ಡೇರಿಯಲ್ಲಿ ಎರಡು ಗುಂಪುಗಳು ಸೃಷ್ಟಿಯಾಗಿವೆ. ನಾವು ಏಳು ಜನರಿದ್ದರೂ ಯಾವುದೇ ಕಾರ್ಯಕ್ರಮಗಳನ್ನಾಗಲಿ, ತೀಮಾರ್ನಗಳಿಗೆ ನಮ್ಮ ಅಭಿಪ್ರಾಯ ಕೇಳದೆ ಸರ್ವಾಧಿಕಾರದ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಸಭೆಗಳನ್ನು ನಡೆಸಬೇಕಾದರೆ ಮೇಲ್ವಿಚಾರಕ ರಾಜು ಗಮನಕ್ಕೂ ತಾರದೆ, ನಿರ್ದೇಶಕರ ಗಮನಕ್ಕೂ ತಾರದೆ ಹಿಟ್ಲರ್ನಂತೆ ವರ್ತಿಸುತ್ತಿದ್ದಾರೆ. ಸಂಘದ ಲಾಭಾಂಶವನ್ನು ರೈತರಿಗೆ ವಿತರಿಸದೆ ಸುಳ್ಳು ಮಾಹಿತಿ ನೀಡುತ್ತಾರೆ ಎಂದು ದೂರಿದರು.
ಪ್ರತಿಭಟನೆ ಅನಿವಾರ್ಯ: ಡೇರಿ ಷೇರುದಾರ ರಾಜಶೇಖರಮೂರ್ತಿ ಮಾತನಾಡಿ, ಡೇರಿಯಲ್ಲಿನ ಅಕ್ರಮ, ಸಹಕಾರ ಸಂದ ಮೇಲಧಿಕಾರಿಗಳ ಲಂಚಗುಳಿತನದಿಂದ ಸಂಘದ ನಿರ್ದೇಶಕರು ಆತಂಕಕ್ಕೀಡಾಗಿದ್ದಾರೆ. ಕಟ್ಟಡ ನಿಮಾರ್ಣದಲ್ಲಿ ಅಕ್ರಮ, ಹಾಲು ಪರೀಕ್ಷೆ, ಪರೀಕ್ಷೆಗೆ ತೆಗೆದುಕೊಂಡ ಹಾಲಿನ ನಿಖರ ಮಾಹಿತಿ ನೀಡದಿರುವುದು, ರೈತರಿಗೆ ಕಡಿಮೆ ದರ ನೀಡುವುದು, ಪಶು ಆಹಾರದಲ್ಲಿ ವಂಚನೆ ಸೇರಿ ಅನೇಕ ಅಕ್ರಮದಲ್ಲಿ ಅಧಿಕಾರಿಗಳು
ತೊಡಗಿಸಿಕೊಂಡಿದ್ದು, ಅಕ್ರಮಕ್ಕೆ ಕಡಿವಾಣ ಬೀಳದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.