

ಕಲಬುರಗಿ: ವೈದ್ಯಕೀಯ ಲೋಕದಲ್ಲಿ ಎದುರಾಗುವ ಹೊಸ ಹೊಸ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಜನರಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯ ವಿದ್ಯಾರ್ಥಿಗಳ ನಿರಂತರ ಸಂಶೋಧನೆ, ಹೊಸತನ್ನು ಯೋಚನೆ ಮೂಲಕ ಸಮಾಜಮುಖಿ ಆಗಬೇಕು. ಪದವಿ ಪೂರ್ಣಗೊಳಿಸಿದವರು ಸಮಾಜಕ್ಕೆ ಕೊಡುಗೆ ನೀಡಲು ಶ್ರಮಿಸಬೇಕು ಎಂದು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಸಚ್ಚಿದಾನಂದ ಹೇಳಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಉತ್ಸರ್ಗ ಮತ್ತು ಪದವಿ ಪ್ರದಾನ ಸಮಾರಂಭದಲ್ಲಿ ವೈದ್ಯ ಪದವಿ ಪೂರ್ಣಗೊಳಿಸಿದ 150 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಹೆತ್ತವರು, ಶಿಕ್ಷಕರು, ಅತಿಥಿಗಳು, ವೈದ್ಯರಾಗಲು ಸಲಹೆ ನೀಡಿದವರು, ಹೊಸದನ್ನು ತಿಳಿಸಿಕೊಟ್ಟವರನ್ನು ಯಾವತ್ತೂ ಮರೆಯಬೇಡಿ. ವೃತ್ತಿಯಲ್ಲಿ ಯಶಸ್ವಿಯಾಗಲು ಅಲರ್ಟ , ಎಥಿಕಲ್, ಇನೊವೇಟಿವ್, ಒಪನ್ ಮೈಂಡ್ ಮತ್ತು ಅಪ್ಡೇಟ್ ಹೀಗೆ ಪಂಚಸೂತ್ರಗಳನ್ನು ಪಾಲಿಸುವಂತೆ ಸಲಹೆ ನೀಡಿದರು.
ನೀವೆಲ್ಲ ಪದವಿ ಪೂರ್ಣಗೊಳಿಸಿ ಆತ್ಮವಿಶ್ವಾಸ ಮತ್ತು ಪರಿಣಿತ ವೈದ್ಯರಾಗಿದ್ದೀರಿ. ಈಗ ನಿಮ್ಮ ಹೊಣೆ ಹೆಚ್ಚಲಿದೆ. ಹೀಗಾಗಿ ಸಕಾರಾತ್ಮಕ ಯೋಚನೆಗಳೊಂದಿಗೆ ಮುನ್ನಡೆಯಬೇಕು. ಸಂಶೋಧನೆಗಳನ್ನು ಮುಂದವರಿಸುತ್ತಲೇ ಉನ್ನತ ಶಿಕ್ಷಣ ಕಲಿಯಿರಿ ಎಂದು ಕಿವಿಮಾತು ಹೇಳಿದರು.
ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಅಧ್ಯಕ್ಷ ಡಾ.ಅಭಿಜೀತ್ ಶೇಠ ಮಾತನಾಡಿ, ಮುಂದಿನ ದಿನಗಳಲ್ಲಿ ಪದವಿ ವೈದ್ಯರಷ್ಟೇ ಸ್ನಾತಕೋತ್ತರ ಪದವಿ ಪಡೆದ ವೈದ್ಯರ ಸಂಖ್ಯೆ ಸಮಗೊಳಿಸುವ ಗುರಿ ಹೊಂದಲಾಗಿದೆ. ಹಲವು ಬದಲಾವಣೆ ತರಲಾಗುತ್ತಿದೆ. ಇದರಿಂದಾಗಿ ಎಲ್ಲರಿಗೂ ಪಿಜಿ ವೈದ್ಯ ಶಿಕ್ಷಣ ಸಿಗುವಂತಾಗಲಿದೆ ಎಂದರು.
ಹೈಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಘಟಿಕೋತ್ಸವ ಭಾಷಣ ಮಾಡಿದರು. ಆರೋಗ್ಯ ವಿವಿ ಕುಲಪತಿ ಸಚ್ಚಿದಾನಂದ ಮತ್ತು ಡಾ.ಶೇಠ ಪದವಿ ಪೂರ್ಣಗಳಿಸಿದವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಎಚ್ಕೆಇ ಉಪಾಧ್ಯಕ್ಷ ಡಾ.ಶಿವಾನಂದ ದೇವರಮನಿ, ಆಡಳಿತ ಮಂಡಳಿ ಸದಸ್ಯರಾದ ಡಾ.ಎಸ್.ಬಿ. ಕಾಮರಡ್ಡಿ, ಡಾ.ಸಂಪತ್ತಕುಮಾರ ಲೋಯಾ, ಡಾ.ವಿಜಯಕುಮಾರ ದೇಶಮುಖ, ಅರುಣಕುಮಾರ ಪಾಟೀಲ್, ಉದಯಕುಮಾರ ಚಿಂಚೋಳಿ, ಅನಿಲಕುಮಾರ ಮರಗೋಳ, ಜಗನ್ನಾಥ ಯಲಿ, ಸಂಗಮೇಶ್ವರ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆ ಮುಖ್ಯಸ್ಥೆ ಡಾ.ಆರುಂಧತಿ ಪಾಟೀಲ್, ಬಸವೇಶ್ವರ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಮಲ್ಲಿಕಾಜರ್ುನ ತೆಗನೂರ, ಎಂಎಲ್ಸಿ ಡಾ.ಚಂದ್ರಶೇಖರ ಪಾಟೀಲ್ ಹುಮನಾಬಾದ್, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರಾದ ಡಾ.ಶಿವಾನಂದ ಮೇಳಕುಂದಿ, ಡಾ.ಶರಣಗೌಡ ಪಾಟೀಲ್, ಡಾ.ಎಸ್.ಎಸ್. ಕಾರಬಾರಿ, ಡಾ.ಪ್ರಕಾಶ ಬಬಲಾದಿ, ವಿಜಯಕುಮಾರ ಕಪ್ಪಿಕೇರಿ, ಡಾ.ಮಹಾನಂದ ಮೇಳಕುಂದಿ, ಡಾ.ಜಯಶ್ರೀ ಹಾಲಕಾಯಿ, ಡಾ.ಸಂಜನಾ ತೆಲ್ಲೂರ, ಡಾ.ಪ್ರತಿಮಾ ಕಾಮರಡ್ಡಿ ಇತರರಿದ್ದರು.
ಆರೋಗ್ಯ ವಿವಿಗೆ ವಿಶ್ವದಲ್ಲೇ 1462ನೇ ರ್ಯಾಂಕ್
ವಿಶ್ವದಲ್ಲಿ 20 ಸಾವಿರ ವಿಶ್ವವಿದ್ಯಾಲಯಗಳಿದ್ದು, ಅದರಲ್ಲಿ ಕನರ್ಾಟಕದ ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ 1462ನೇ ರ್ಯಾಂಕಿಂಗ್ ಸಿಕ್ಕಿದೆ. ಮುಂದಿನ ದಿನಗಳಲ್ಲಿ 500 ಇಲ್ಲವೇ 100 ರ್ಯಾಂಕಿಂಗ್ ಒಳಗೆ ತರುವ ಗುರಿ ಹೊಂದಲಾಗಿದೆ ಎಂದು ಕುಲಪತಿ ಡಾ.ಸಚ್ಚಿದಾನಂದ ಹೇಳಿದರು. ದೇಶದಲ್ಲಿ ಮೊದಲು ಎನ್ನುವಂತೆ ಪದವಿ ಹಂತದಲ್ಲೇ ಸಂಶೋಧನೆಗೆ ಅವಕಾಶ ನೀಡಲಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡಲಾಗುತ್ತಿದೆ. ಪಠ್ಯಕ್ರಮ ಬದಲಿಸಲಾಗಿದೆ. ಬೋಧಕರಲ್ಲಿ ಪರಿಣತಿ ಹೆಚ್ಚಿಸಲಾಗಿದೆ. ಪರೀಕ್ಷಾ ಸುಧಾರಣೆ ಜತೆಗೆ ಡಿಜಿಟಲ್ ಮೌಲ್ಯಮಾಪನ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು. ಆರೋಗ್ಯ ವಿವಿಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ ಇದ್ದುದ್ದರಿಂದ 2020-21 ಅನ್ನು ಎಲ್ಲೆಡೆ ಬೆಳ್ಳಿ ಮಹೋತ್ಸವ ನಡೆಯಲಿದ್ದು, ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.