ಹೊಸ ಸಂಗತಿ ತಿಳಿಸುವ ಪ್ರವಾಸ ಕಥನ

shivkumar katte
Published on

ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರ ವಿಶೇಷ ಕರ್ತವ್ಯಾಧಿಕಾರಿ, ಸಾಹಿತಿ ಶಿವಕುಮಾರ ಕಟ್ಟೆ ರಚಿತ ನಾಲ್ದೇರಾ ಪ್ರವಾಸ ಕಥನ ಕೃತಿಯು ವಿಷಯ ಜ್ಞಾನ ಪಡೆಯಲು ಪೂರಕವಾಗಿದೆ ಎಂದು ಅಪರ ಡಿಸಿ ರುದ್ರೇಶ ಘಾಳಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ವತಿಯಿಂದ ಗುರುವಾರ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ನಾಲ್ದೇರಾ ಕೃತಿ ಪರಿಚಯ ಹಾಗೂ ಸಹ ಪ್ರವಾಸಿಗರೊಂದಿಗೆ ಮುಖಾಮುಖಿ ಕಾರ್ಯಕ್ರಮ ಉದ್ಘಾಟಿಸಿ, ಕಟ್ಟೆ ಅವರು ವಿವಿಧ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡ ವೇಳೆ ಕಂಡ ದೃಶ್ಯ ಮತ್ತು ಹೊಸ ಅನುಭವಗಳನ್ನು ಅತ್ಯಂತ ಸುಂದರ ಮತ್ತು ಅರ್ಥಪೂರ್ಣವಾಗಿ ಕೃತಿಯಲ್ಲಿ ಬರೆದಿದ್ದಾರೆ. ಅನೇಕ ಹೊಸ ಸಂಗತಿಗಳು ಇದರಿಂದ ತಿಳಿದುಕೊಳ್ಳಬಹುದು ಎಂದರು.

ಪುಸ್ತಕ ಪರಿಚಯಿಸಿದ ಸಾಹಿತಿ ಡಾ. ಸಂಜೀವಕುಮಾರ ಅತಿವಾಳೆ, ಕೃತಿಯುದ್ದಕ್ಕೂ ಐತಿಹಾಸಿಕ ಘಟನೆಗಳನ್ನು ಕಟ್ಟೆ ಅವರು ಚೆನ್ನಾಗಿ ನಿರೂಪಿಸಿದ್ದಾರೆ. ಸ್ಮಾರಕ, ಕಟ್ಟಡ, ಸ್ಥಳಗಳಿಗೆ ಸಂಬಂಧಿಸಿದಂತೆ ವಿವರಣೆ ಕರಾರುವಕ್ಕಾಗಿ ದಾಖಲಿಸಿದ್ದಾರೆ. ಇದನ್ನು ಓದುವವರಿಗೆ ಲೋಕ ಜ್ಞಾನದ ಜತೆಗೆ ಅನೇಕ ಹೊಸ ವಿಷಯಗಳ ಪರಿಚಯವಾಗಲಿದೆ ಎಂದರು.

ಕಸಾಪ ಜಿಲ್ಲಾ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ರಮೇಶ ಬಿರಾದಾರ, ರಾಮಚಂದ್ರ ಗಣಾಪೂರ, ವಿಜಯಕುಮಾರ ಸೋನಾರೆ ಮಾತನಾಡಿದರು. ಮಲ್ಲಿಕಾರ್ಜುನ ಬಿ., ಬಕ್ಕಪ್ಪ ನಿರ್ಣಾಕರ್, ರವಿಂದ್ರಕುಮಾರ ಬಡಿಗೇರ ಹಾಗೂ ಲೇಖಕ ಶಿವಕುಮಾರ ಕಟ್ಟೆ ಅವರು ಪ್ರವಾಸದ ಅನುಭವ ಹಂಚಿಕೊಂಡರು. ಪಾಲಿಟೆಕ್ನಿಕ್ ಪ್ರಾಚಾರ್ಯ ಪ್ರಭು ಹೊಸಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ.ಬಸವರಾಜ ಬಲ್ಲೂರ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಹಿರಿಯ ಸಾಹಿತಿ ಎಂ.ಜಿ.ಗಂಗನಪಳ್ಳಿ, ಶಿರೋಮಣಿ ತಾರೆ, ಮಚೇಂದ್ರ, ವಿಜಯಶೆಟ್ಟಿ, ರಾಜಶೇಖರ ಮಿತ್ರಾ, ಅರುಣಕುಮಾರ, ವಿದ್ಯಾಸಾಗರ, ಶೈಲಜಾ, ಸುರೇಖಾ, ಗೀತಾ ಪಾಟೀಲ್, ಅಸ್ಮಾ, ಜ್ಯೋತಿ ಇತರರಿದ್ದರು. ಶಂಭುಲಿಂಗ ವಾಲ್ದೊಡ್ಡಿ ಸ್ವಾಗತಿಸಿದರು. ದೇವಿದಾಸ ಜೋಶಿ ನಿರೂಪಣೆ ಮಾಡಿದರು. ಮಲ್ಲಿಕಾರ್ಜುನ ಬಿ.ಆರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net