ಹೊಸ ವರ್ಷಾಚರಣೆಗೆ ಮದ್ಯದ ಕಿಕ್ ಭರ್ಜರಿ..!

bkt-1-1 (1)
ಬಾಗಲಕೋಟೆ ನವನಗರದಲ್ಲಿರುವ ಅಬಕಾರಿ ಉಪ ಆಯುಕ್ತರ ಕಚೇರಿ.
Published on

ಸಂತೋಷ ದೇಶಪಾಂಡೆ ಬಾಗಲಕೋಟೆ:

ಬರಗಾರ, ಪ್ರವಾಹದಿಂದ ಕಳೆದ ಎರಡು ಮೂರು ವರ್ಷದಿಂದ ಹೊಸ ವರ್ಷಾಚರಣೆ ಸಪ್ಪೆಯಾಗಿತ್ತು, ಪ್ರಸಕ್ತ ವರ್ಷ ಜಿಲ್ಲೆಯಾದ್ಯಂತ ಹೊಸ ವರ್ಷವನ್ನು ಸಂಭ್ರಮ, ಸಡಗರಿಂದ ಸ್ವಾಗತಿಸಲಾಯಿತು. ಮದ್ಯದ ವಹಿವಾಟು ಭರ್ಜರಿಯಾಗಿದೆ ನಡೆದಿದೆ. ಕೋಟೆನಾಡಿನಲ್ಲಿ ಕಳೆದ ಒಂದು ದಶಕದ ಅವಽಯಲ್ಲಿ ಬಹು ದೊಡ್ಡ ಮದ್ಯದ ವಹಿವಾಟ ೨೦೨೫ ವರ್ಷಾಚರಣೆಯಲ್ಲಿ ದಾಖಲಾಗಿದೆ...!

ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆ, ಮುಧೋಳ, ಜಮಖಂಡಿ, ತೇರದಾಳ, ಬಾದಾಮಿ, ಹುನಗುಂದ, ಗುಳೇದಗುಡ್ಡ, ಇಳಕಲ್ಲ, ರಬಕವಿ-ಬನಹಟ್ಟಿ ಸೇರಿದಂತೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಯುವಕರು ಪಾರ್ಟಿ ಆಯೋಜನೆ ಮಾಡುವ ಮೂಲಕ ಮದ್ಯ ಕಿಕ್ ಬೂಸ್ಟರ್ ನೀಡಿದ್ದಾರೆ. ಇದರ ಪರಿಣಾಮ ೨೦೨೪ ಕ್ಕಿಂತ ೨೦೨೫ ರ ಹೊಸ ವರ್ಷದ ಅಂಗವಾಗಿ ಅಂದಾಜು ೪.೩ ವಹಿವಾಟು ಹೆಚ್ಚಳಗೊಂಡಿದೆ. ಹೊಟೇಲ್, ರೆಸ್ಟೋರೆಂಟ್, ವಿಶೇಷ ಕಾರ್ಯಕ್ರಮಗಳು ಮತ್ತಷ್ಟು ರಂಗು ನೀಡಿದವು. ಸಂಭ್ರಮಾಚರಣೆಗಳು ಶಾಂತಿವಾಗಿ ನಡೆದಿತ್ತು ಸಂತಸ ಉಂಟು ಮಾಡಿದರು.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸಕ್ತ ವರ್ಷ ಡಿಸೆಂಬರ್ ೩೧ ರಂದು ಲಿಕ್ಕರ್ ಹಾಗೂ ಬಿಯರ್ ಮಾರಾಟಕ್ಕೆ ಎರಡು, ಮೂರು ಪಟ್ಟು ಹೆಚ್ಚಳಗೊಂಡಿದೆ. ೨೦೨೩ ಡಿಸೆಂಬರ್ ೩೧ ರಂದು ಮದ್ಯ ೩೭೩೬ ಬಾಕ್ಸ್ ೧.೬೭ ಕೋಟಿ ರೂ., ಹಾಗೂ ಬಿಯರ್ ೨೨೩೬ ಬಾಕ್ಸ್ ೪೧ ಲಕ್ಷ ರೂ. ಸೇರಿ ೨.೦೮ ಕೋಟಿ ರೂ. ಮದ್ಯದ ವಹಿವಾಟು ನಡೆದಿತ್ತು. ಡಿಸೆಂಬರ್ ೩೧ ೨೦೨೪ ರಂದು ಮದ್ಯ ೧೧೫೨೦ ಬಾಕ್ಸ್ ೫.೩೦ ಕೋಟಿ ರೂ. ಹಾಗೂ ಬಿಯರ್ ೫೬೬೫ ಬಾಕ್ಸ್ ೧.೦೮ ಕೋಟಿ ರೂ. ಸೇರಿ ಒಟ್ಟು ೬.೩೮ ಕೋಟಿ ರೂ. ಮಾರಾಟವಾಗಿದೆ. ಅಂದರೇ ೨೦೨೩ ಡಿಸೆಂಬರ್ ಹಾಗೂ ೨೦೨೪ ಡಿಸೆಂಬರ್ ೩೧ ಕ್ಕೆ ಹೋಲಿಕೆ ೪.೩ ಕೋಟಿ ರೂ. ವಹಿವಾಟು ಹೆಚ್ಚಳಗೊಂಡಿದೆ.

ಒಂದು ಕಡೆಗೆ ಮದ್ಯ ಹಾಗೂ ಬಿಯರ್ ಬೆಲೆ ಏರಿಕೆ ಎ-ೆಕ್ಟ್ ನಿಂದ ಜನರು ವಿಶೇಷವಾಗಿ ಎಣ್ಣೆ ಪಾರ್ಟಿಗಳ ಮೂಲಕ ಹೊಸ ವರ್ಷಾಷರಣೆ ಸಂಭ್ರಮಿಸಲು ಹೋಗಲ್ಲ ಅಂತ ಭಾವಿಸಲಾಗಿತ್ತು. ಕಳೆದ ಎರಡು ಮೂರು ವರ್ಷದಲ್ಲಿ ಕೋವಿಡ್, ಬರಗಾಲ, ಪ್ರವಾಹವು ಕಾಡಿತ್ತು. ಸರ್ಕಾರ ಮದ್ಯದ ಬೆಲೆ ಬೇಕಾಬಿಟ್ಟಿಯಾಗಿ ಹೆಚ್ಚಳ ಮಾಡಿತ್ತು. ಬಾರ್ ಮಾಲೀಕರ ಆತಂಕಕ್ಕೆ ಕಾರಣವಾಗಿತ್ತು. ಆದರೇ ಎಲ್ಲವನ್ನು ಹಿಂದಿಕ್ಕಿ ಸಾಗಿದ್ದು ಅಚ್ಚರಿಗೆ ಕಾರಣವಾಗಿದೆ.

ನೂತನ ವರ್ಷಾಚರಣೆ ಹಿನ್ನೆಲೆಯಲ್ಲಿ ಹೋಟೆಲ್, ರೆಸ್ಟೋರೆಂಟ್ ಗಳು ಭರ್ಜರಿ ತಯಾರಿ ಮಾಡಿಕೊಂಡಿದ್ದವು. ರಾತ್ರಿ ಆಗುತ್ತಿದ್ದಂತೆ ರಂಗು ಪಡೆದುಕೊಂಡವು. ಸಾರ್ವಜನಿಕರು ಕೂಡ ತಮ್ಮದೇ ಆದ ಸ್ಥಳದಲ್ಲಿ ಗುರುತಿಕೊಂಡು ನಾಲ್ಕಾರು ಜನ ಸೇರಿ ಹೊಸ ವರ್ಷವನ್ನು ಸ್ವಾಗತಿಸಿದರು. ಕೆಲವರು ಗೋವಾ, ಮಹಾರಾಷ್ಟç, ಕೆಲವು ಕಡೆಯ ಮಿಲ್ಟಿçà ಕ್ಯಾಂಟೀನಗಳಲ್ಲಿ ಮದ್ಯ ಆಮದು ಮಾಡಿಕೊಂಡು ವರ್ಷಾಚರಣೆ ಮಾಡಿದರು. ಹೊಸ ವರ್ಷದಲ್ಲಿ ಅವಘಡಗಳು ಸಂಭವಿಸಿಲ್ಲ. ಮದ್ಯದಿಂದ ಗದ್ದಲ, ಗಲಾಟೆ ಆಗಲಿಲ್ಲ ಎನ್ನುವುದೇ ಸಂತೋಷದ ಸಂಗತಿ. ದುರಂತ ಅಂದರೇ ಕುಡಿತ ಕಡಿಮೆ ಆಗಲಿಲ್ಲ ಎನ್ನುವುದೇ ನೋವಿನ ಸಂಗತಿ.

ಪ್ರಸಕ್ತ ಹೊಸ ವರ್ಷದ ಸಂದರ್ಭದಲ್ಲಿ ಮದ್ಯ, ಬಿಯರ್ ಮಾರಾಟ ಹೆಚ್ಚಳಗೊಂಡಿದೆ. ಕಳೆದ ವರ್ಷ ಬಹಳಷ್ಟು ಕುಸಿತ ಕಂಡಿತ್ತು. ಡಿಸೆಂಬರ್ ೩೧ ೨೦೨೪ ಕ್ಕೆ ಮದ್ಯ, ಬಿಯರ್ ಒಟ್ಟು ೬.೩೮ ಕೋಟಿ ರೂ. ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೇ ೪ ಕೋಟಿ ರೂ. ಅಽಕ ವಹಿವಾಟು ಹೆಚ್ಚಳಗೊಂಡಿದೆ ಎಂದು ಅಬಕಾರಿ ಡಿಸಿ ಶಿವಲಿಂಗಪ್ಪ ಬನಹಟ್ಟಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net