ಹೊಸ ವರ್ಷಾಚರಣೆ ಪಾರ್ಟಿಗಳಿಗೆ ಅನುಮತಿ ಕೊಡದಂತೆ ಒತ್ತಾಯಿಸಿ ಮನವಿ

CTD 29 NEWS VHP--05
Published on

ಚಿತ್ರದುರ್ಗ: ಹೊಸ ವರ್ಷಾಚರಣೆ ಹೆಸರಲ್ಲಿ ಹಿಂದು ಧರ್ಮ,ಸಂಸ್ಕೃತಿಗೆ ವಿರುದ್ಧವಾಗಿ ನಡೆಯುವಂಥ ಪಾರ್ಟಿಗಳಿಗೆ ಅನುಮತಿ ನೀಡದಂತೆ ಆಗ್ರ ಹಿಸಿ ಶುಕ್ರವಾರ ವಿಶ್ವ ಹಿಂದು ಪರಿಷತ್, ಬಜರಂಗದಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದೆ. ಡಿ.31ರ ರಾತ್ರಿ ಜಿಲ್ಲೆಯ ಕೆ ಲವು ಹೋಟೆಲ್‌ಗಳು, ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತು ಸೇವನೆ, ನೃತ್ಯ, ಡಿಜೆ ಪಾರ್ಟಿಗಳು ನಡೆಯುವ ಸಾಧ್ಯತೆಗಳಿವೆ.
ಮದ್ಯ ಸೇವಿಸಿದ ಹಲವು ಯುವಕರು ಅತೀ ವೇಗದ ವಾಹನಗಳ ಚಾಲನೆ, ಬೈಕ್‌ವೀಲಿಂಗ್ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಹಿ ಂದು ಧರ್ಮ,ಸಂಸ್ಕೃತಿಗೆ ಧಕ್ಕೆ ತರುವಂಥ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡುವಂಥ ಕಾರ‌್ಯಕ್ರಮಗಳಿಗೆ ಅನುಮತಿ ಕೊಡಬಾರದೆ ಂದು ವಿಶ್ವ ಹಿಂದುಪರಿಷತ್,ಬಜರಂಗದಳದ ಪ್ರಮುಖರು ಎಸ್‌ಪಿ ಧರ್ಮೇಂದರ್‌ಕುಮಾರ್‌ಮೀನಾ ಅವರನ್ನು ಒತ್ತಾಯಿಸಿದ್ದಾರೆ. ವಿ ಎಚ್‌ಪಿ ಜಿಲ್ಲಾ ಕಾರ‌್ಯದರ್ಶಿ ಪಿ.ರುದ್ರೇಶ್, ಕೇಶವ್, ರಂಗನಾಥ್, ರೇಣುಸ್ವಾಮಿ, ಸುರೇಶ್, ತೇಜಸ್, ಗುರುರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net