ಹೊಸ ವರ್ಷ ಸ್ವಾಗತಕ್ಕೆ ಭರದ ಸಿದ್ಧತೆ

accbabf6-8dd4-4399-b976-5f2319750aff
ಬಾಗಲಕೋಟೆ ನಗರದ ಮಾರುಕಟ್ಟೆಯಲ್ಲಿ ಕೇಕ್ ಖರೀದಿ ಜೋರಾಗಿತ್ತು.
Published on

ಬಾಗಲಕೋಟೆ: ೨೦೨೪ ಇನ್ನೇನು ಪೂರ್ಣಗೊಂಡಿದ್ದು, ೨೦೨೫ ಸ್ವಾಗತಕ್ಕೆ ಭರದ ಸಿದ್ಧತೆ ಮಂಗಳವಾರ ಜಿಲ್ಲೆಯಾದ್ಯಂತ ನಡೆಯಿತು. ಕೋಟೆನಾಡಿನೆಲ್ಲೆಡೆ ಸಾರ್ವಜನಿಕರ ಉತ್ಸಾಹ ಇಮ್ಮಡಿಗೊಂಡಿತ್ತು.

ಬಾಗಲಕೋಟೆ, ನವನಗರ, ವಿದ್ಯಾಗಿರಿ ಸೇರಿದಂತೆ, ಮುಧೋಳ, ಜಮಖಂಡಿ, ಬೀಳಗಿ, ಬಾದಾಮಿ, ಹುನಗುಂದ, ರಬಕವಿ-ಬನಹಟ್ಟಿ ಹಾಗೂ ಗ್ರಾಮೀಣ ಭಾಗದಲ್ಲಿ ನೂತನ ವರ್ಷಾಚರಣೆ ಹಿನ್ನಲೆಯಲ್ಲಿ ದೊಡ್ಡ ದೊಡ್ಡ ರೆಸ್ಟೋರೆಂಟ್, ಹೊಟೇಲುಗಳಲ್ಲಿ ಸಿದ್ಧತೆ ಜೋರಾಗಿತ್ತು. ಸಂಗೀತ, ಭಾವಗೀತೆ, ಸುಗಮ ಸಂಗೀತ ಮೂಲಕ ಕೆಲವೆಡೆ ಸಾಂಪ್ರದಾಯಿಕ ಮಾತ್ರ ಕಾರ್ಯಕ್ರಮಗಳು ಏರ್ಪಡಿಸಲಾಗಿತ್ತು. ಜಿಲ್ಲೆಯ ನಗರದ ಪ್ರದೇಶದ ಸಡಗರ ಸಂಭ್ರಮ ಕಂಡು ಬಂದಿತು.

ಪ್ರಮುಖ ಬೀದಿಗಳಲ್ಲಿ ಹೊಸ ವರ್ಷದ ಬರಹಗಳು ಬಿಡಿಸಲಾಯಿತು. ಮಕ್ಕಳು, ಯುವಕರು ಸೇರಿದಂತೆ ಎಲ್ಲರು ಸಿಹಿ ಖರೀದಿಸಿದರು. ಪಟಾಕಿ ಹಾಗೂ ಕೇಕ್‌ಗಳನ್ನು ಖರೀದಿಸಲು ಜನರು ಮುಗಿಬಿದ್ದರು. ಹೊಟೇಲ್, ಬಟ್ಟೆ ಅಂಗಡಿಗಳು, ಬೇಕರಿಗಳಲ್ಲಿ ಜನ ಜಂಗುಳಿ ಕಂಡು ಬಂದಿತು. ೨೦೨೪ ಕಹಿ ನೆನಪುಗಳಿಗೆ ಬೈ ಬೈ ಹೇಳಲಾಯಿತು.

ಇನ್ನು ಹೊಸ ವರ್ಷಾಚರಣೆ ನೆಪದಲ್ಲಿ ವರ್ತನೆ ಮೀರಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇರಿಸಿದೆ. ಜಿಲ್ಲೆಯಾದ್ಯಂತ ಪೋಲೀಸ್ ಇಲಾಖೆ ಹೈ ಅಲರ್ಟ ಆಗಿತ್ತು, ಹೊಸ ವರ್ಷಾಚರಣೆಯ ನೆಪದಲ್ಲಿ ರಾತ್ರಿಯಲ್ಲಾ ರಸ್ತೆ ಹಾಗೂ ಪ್ರಮುಖ ವೃತ್ತಗಳಲ್ಲಿ ಜನರು ತಮ್ಮ ಮನಸ್ಸಿಗೆ ಬಂದAತೆ ವರ್ತನೆ ಮಾಡುತ್ತಾ ಜನರಿಗೆ ತೊಂದರೆ ಮಾಡುವುದು ಕಂಡು ಬಂದರೆ ಶಿಸ್ತು ಕ್ರಮಕ್ಕೆ ಇಲಾಖೆ ಎಚ್ಚರಿಕೆ ನೀಡಿತ್ತು. ಡ್ರಿಂಕ್ * ಡ್ರೆÊವ್ ಪರಿಶೀಲನೆ ಜೋರಾಗಿ ನಡೆದಿತ್ತು, ಜಿಲ್ಲೆಯ ನಾಕಾ ಬಂದಿ ಇರುವ ಸ್ಥಳದಲ್ಲಿ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಅಕ್ರಮ ಮಧ್ಯ ಮಾರಾಟ ಮಾಡುವ ಸ್ಥಳಗಳ ಮೇಲೆಯೂ ಪೊಲೀಸ್ ಇಲಾಖೆ ನಿಗಾ ವಹಿಸಿತ್ತು.

ಬಾಗಲಕೋಟೆ, ನವನಗರ, ವಿದ್ಯಾಗಿರಿ ಸೇರಿದಂತೆ ಜಿಲ್ಲೆಯಾದ್ಯಂತ ಪ್ರಮುಖ ವೃತ್ತ, ರಸ್ತೆಗಳಲ್ಲಿ ಈಗಾಗಲೇ ಅಳವಡಿಸಿರುವ ಸಿಸಿಟಿವಿ ಕ್ಯಾಮರಾ ಕೂಡ ಕಣ್ಣು ಅವಲೋಕನ ನಡೆಸಿತು. ಜಿಲ್ಲೆಯಲ್ಲಿನ ಐತಿಹಾಸಿಕ ಕ್ಷೇತ್ರವಾಗಿರುವ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮಕ್ಕೆ ಬರುವ ಹೊಸ ವರ್ಷಾಚರಣೆಯ ದಿನದಂದು ಜನರು ಬರುವವರ ಸಂಖ್ಯೆ ಹೆಚ್ಚಾಗಿದ್ದರಿಂದ, ಪ್ರವಾಸಿಗರಿಗೆ ತೊಂದರೆಯಾಗದAತೆ ಜಾಗೃತಿ ವಹಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net