ಹೊಸ ವರ್ಷ ಎಲ್ಲರಿಗೂ ನೆಮ್ಮದಿ ತರಲಿ

KANDKURU
Published on

ಯಾದಗಿರಿ: ನೂತನ ವರ್ಷ ಜಿಲ್ಲೆಯ ಸಮಸ್ತೆ ಜನತೆಗೆ ನೆಮ್ಮದಿ ಹಾಗೂ ಆರೋಗ್ಯ ಭಾಗ್ಯ ಕರುಣಿಸಲಿ ಎಂದು ಶಾಸಕ ನಾಗನಗೌಡ ಕಂದಕೂರ ತಿಳಿಸಿದರು.

ಗುರುವಾರ ನಗರದಲ್ಲಿ ಗುರುಮಠಕಲ್ ಜೆಡಿಎಸ್ನಿಂದ ನೂತನ ವರ್ಷದ ದಿನದಶರ್ಿಕೆ ಬಿಡುಗಡೆಗೊಳಿಸಿ ಮಾತನಾಡಿ, ಕಳೆದ ವರ್ಷ ಹಲವು ಅನಾಹುತ ಘಟಿಸಿವೆ. ಅಲ್ಲದೆ ಅತಿವೃಷ್ಠಿಯಿಂದ ರೈತಾಪಿ ವರ್ಗ ಕಂಗಾಲಾಗಿದ್ದಾರೆ. ಗುರುಮಠಕಲ್ ಕ್ಷೇತ್ರದಲ್ಲಿ ಮಳೆ ಬರದೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಆ ಎಲ್ಲ ನೋವುಗಳನ್ನು ಹೊಸ ವರ್ಷ ಮರೆಸುವ ಮೂಲಕ ನಾಡಿಗೆ ಅನ್ನ ನೀಡುವ ಅನ್ನದಾತರಿಗೆ ಹಿಗ್ಗು ತರುವಂತಾಗಲಿ ಎಂದು ಹಾರೈಸಿದರು.

ನನ್ನ ಅವಯಲ್ಲಿ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಮತದಾರರಿಗೆ ಕೊಟ್ಟ ಭರವಸೆಯಂತೆ ನಡೆದುಕೊಂಡ ತೃಪ್ತಿ ನನಗಿದೆ. ಇನ್ನೂ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯಬೇಕಿದ್ದು, ಮುಂದಿನ ದಿನಗಳಲ್ಲಿ ಜನರ ಸಹಕಾರದೊಂದಿಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಪಕ್ಷದ ಜಿಲ್ಲಾ ವಕ್ತಾರ ಮಲ್ಲನಗೌಡ ಹಳಿಮನಿ ಕೌಳೂರು, ಸುರೇಶ ಅಲ್ಲಿಪುರ, ಶಿವಪ್ಪ ಯರಗೋಳ, ವಿಶ್ವನಾಥ ರ್ಯಾಕಾ, ಸಂತೋಷ ಚಾಮನಳ್ಳಿ ತಾಂಡಾ, ಬಂದಪ್ಪಗೌಡ, ಶರಣಗೌಡ ಹೊಸಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net