

ಮೈಸೂರು: ಹೊಸ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ನೈಋತ್ಯ ರೈಲ್ವೆ ಮಜ್ದೂರ್ ಯೂನಿಯನ್ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ವಿಭಾಗೀಯ ರೈಲ್ವೆ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹೊಸ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ರದ್ದುಪಡಿಸಬೇಕು. ನಂತರ ನೇಮಕವಾದ ಎಲ್ಲ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅನ್ವಯಿಸುವುದನ್ನು ಕೈಬಿಡಬೇಕು. ಈ ಪಿಂಚಣಿ ಯೋಜನೆಯ ಪ್ರಕಾರ, ನೌಕರರು ದುಡಿದ ಹಣವನ್ನು ಹೂಡಿಕೆ ಮಾಡಲಾಗುತ್ತದೆ. ಅತ್ಯಂತ ಅನಿಶ್ಚಿತ ಷೇರು ಮಾರುಕಟ್ಟೆಯ ಸೆನ್ಸೆಕ್ಸ್, ಸರ್ಕಾರಿ ಸುರಕ್ಷತೆ ಇತ್ಯಾದಿ ರಿಟರ್ನ್ಸ್ ಅನ್ನು ಪಿಂಚಣಿಯಾಗಿ ಪಾವತಿಸಲಾಗುತ್ತದೆ. ಇದು ಸರಿಯಲ್ಲ. ನಿವೃತ್ತ ನೌಕರರಿಗೆ ಆರ್ಥಿಕ ಭದ್ರತೆ ಕಲ್ಪಿಸಿಕೊಡಬೇಕು. ಅದಕ್ಕಾಗಿ ಹಳೆಯ ಪಿಂಚಣಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು
ಸಂಘಟನೆಯ ಮೈಸೂರು ವಿಭಾಗದ ಅಧ್ಯಕ್ಷ ಎಸ್. ಸೋಮಶೇಖರ್, ವಿಭಾಗೀಯ ಕಾರ್ಯದರ್ಶಿ ಪಿ.ಶಿವಪ್ರಕಾಶ್, ವಲಯ ಅಧ್ಯಕ್ಷ ಆರ್.ಆರ್. ನಾಯಕ್, ವಿಭಾಗೀಯ ಖಜಾಂಚಿ ಎಂ. ನಾಗೇಂದ್ರನ್ ಇತರರು ಇದ್ದರು.