ಹೊಸ ಬೋಟ್​ ಒದಗಿಸಿದ ಶಾಸಕ

3
Published on

ಚನ್ನಮ್ಮನ ಕಿತ್ತೂರು: ತಾಲೂಕಿನ ನಿಂಗಾಪುರ ಗ್ರಾಮದ ಕೆಲ ಕೃಷಿಕ ಕುಟುಂಬಗಳು ಜಮೀನಿನಿಂದ ಕೆರೆ ದಾಟಲು ಮಳೆಗಾಲದಲ್ಲಿ ತೀವ್ರ ಹರಸಾಹಸ ಪಡುತ್ತಿದ್ದರು. ಸೋಮವಾರ ಗಾಳಿಯಿಂದ ತುಂಬಿದ ಟೆಯರ್​ ಹಾಗೂ ಟ್ಯೂಬ್​ ಬಳಸಿ ಹಲಗೆ ಮೇಲೆ ಕುಳಿತು ಶಾಲಾ ಮಕ್ಕಳು ನದಿ ದಾಟಿದ್ದ ವಿಡಿಯೋ ಎಲ್ಲೆಡೆ ವೈರಲ್​ ಆಗಿ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಮಂಗಳವಾರ ಟನಾ ಸ್ಥಳಕ್ಕೆ ಶಾಸಕ ಬಾಬಾಸಾಹೇಬ ಪಾಟೀಲ ಅವರು ದೌಡಾಯಿಸಿದರು. ತಣ ಹೊಸ ಬೋಟ್​ ವ್ಯವಸ್ಥೆ ಮಾಡಿದರು. ಮಳೆ ಕಡಿಮೆಯಾಗುತ್ತಿದ್ದಂತೆ ಕಿರುಸೇತುವೆ ನಿರ್ಮಾಣ ಮಾಡಿ ಗ್ರಾಮಸ್ಥರು ಶಾಲಾ ಮಕ್ಕಳಿಗೆ ಅನುಕೂಲ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಕೆಲವರ ಜಮೀನಿಗೆ, ಶಾಲೆಗೆ ತೆರಳಲು ಕೆರೆ ದಾಟಿಯೇ ಹೋಗಬೇಕಿತ್ತು. ಹಲವು ವರ್ಷಗಳಿಂದ ಕಿರುಸೇತುವೆ ನಿರ್ಮಿಸಿಕೊಡುವಂತೆ ಹಲವು ಬಾರಿ ಅ-ಧಿಕಾರಿಗಳು, ಜನಪ್ರತಿನಿಧಿ-ಗಳಿಗೆ ಸ್ಥಳಿಯ ಕೃಷಿಕ ಕುಟುಂಬಗಳು ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಅನಿವಾರ್ಯವಾಗಿ ಟೈಯರ್​ ಟ್ಯೂಬ್​ ಬಳಸಿ ಹಲಗೆ ಮೇಲೆ ಕುಳಿತು ಶಾಲಾ ಮಕ್ಕಳು, ಜನರು ಪ್ರಯಾಸದಿಂದ ಕೆರೆ ದಾಟುತ್ತಿದ್ದರು. ತಹಸೀಲ್ದಾರ್​ ರವೀಂದ್ರ ಹಾದಿಮನಿ, ಲೋಕೋಪಯೋಗಿ ಅಧಿಕಾರಿ ಸಂಜೀವ ಮಿರಜಕರ, ತಾಲೂಕು ಶಿಣಾಧಿಕಾರಿ ಚನ್ನಬಸಪ್ಪ ತುಬಾಕಿ, ಅಶ್ಪಾಕ್​ ಹವಾಲ್ದಾರ್​, ಬಿಷ್ಠಪ್ಪ ಶಿಂಧೆ, ಮಹಾಂತೇಶ ಎಮ್ಮೆ, ದಶರಥ ಮಡಿವಾಳರ, ಸತೀಶ ಸಾವನ್ನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net