ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ

Oplus_131072
 ಹಾರಕೂಡ ಶ್ರೀಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು. ಉಪನ್ಯಾಸಕ ಸಂತೋಷ ಹೊಸಮನಿ, ಮಲ್ಲಿನಾಥ ಹಿರೇಮಠ ಹಾರಕೂಡ, ಮೇಘರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ, ಪಂಡಿತರಾವ ಡಾವರೆ, ವಿಜಯಕುಮಾರ ಸಂಗೋಳಗೆ, ಪಂಡಿತರಾವ ದೇಗಾಂವ, ಸುಭಾಷ ಮುರುಡ, ವಿಠಲ್ ಹೂಗಾರ ಇತರರಿದ್ದರು.
Published on

ಬಸವಕಲ್ಯಾಣ: ಕಲೆ, ಸಾಹಿತ್ಯ, ಸಂಗೀತ, ಗಾಯನ, ನಾಟ್ಯ ಮುಂತಾದವುಗಳನ್ನು ಒಳಗೊಂಡ ವ್ಯವಸ್ಥಿತ ಸಂಭ್ರಮಾಚರಣೆಯಿಂದ ಸಮಾಜಕ್ಕೆ ವಿಶೇಷ ಸಂದೇಶ ಕೊಡಲು ಸಹಕಾರಿಯಾಗುತ್ತದೆ ಎಂದು ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

ಹಾರಕೂಡ ಶ್ರೀಮಠದಲ್ಲಿ ರಾಗ ಸಂಗೀತ ಸಾಂಸ್ಕೃತಿಕ ಕಲಾ ಸಂಘ (ರಿ)ಕಲಖೋರಾ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಸಾಮಾಜಿಕ ನಡುವಳಿಕೆಗಳು, ಮೌಲ್ಯಗಳು ಮಾಸದಂತೆ ನಿತ್ಯ ನೂತನವಾಗಿರಬೇಕಾದರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅವಶ್ಯಕವಾಗಿದೆ. ಹೊಸ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಕೊಡುವುದರೊಂದಿಗೆ ನಮ್ಮ ನಾಡಿನ ಶ್ರೀಮಂತ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ಬಳವಳಿಯಾಗಿ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಂಸ್ಕೃತಿಯ ಉಳಿವಿಗಾಗಿ ಹಾಗೂ ಅದರ ರಚನಾತ್ಮಕ ಬೆಳವಣಿಗೆಗಾಗಿ ಒಂದು ಸಂಘ ಅಥವಾ ಇಲಾಖೆ ಸೀಮಿತವಾಗದೆ ಜನಾಂದೋಲನವಾಗಬೇಕು. ಇದರ ಹೊಣೆಗಾರಿಕೆಯನ್ನು ಅರಿತು ಪ್ರತಿಯೊಬ್ಬರೂ ಜವಾಬ್ದಾರಿಯಿಂದ ತಮ್ಮ ತಮ್ಮ ಕೊಡುಗೆ ನೀಡುವುದು ಅವಶ್ಯಕವಾಗಿದೆ ಎಂದರು.

ಉಪನ್ಯಾಸಕ ಸಂತೋಷ ಹೊಸಮನಿ ಮಾತನಾಡಿದರು. ಮಲ್ಲಿನಾಥ ಹಿರೇಮಠ ಹಾರಕೂಡ, ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಮೇಘರಾಜ ನಾಗರಾಳೆ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಪಂಡಿತರಾವ ಡಾವರೆ, ವಿಜಯಕುಮಾರ ಸಂಗೋಳಗೆ, ಪಂಡಿತರಾವ ದೇಗಾಂವ, ಸುಭಾಷ ಮುರುಡ, ವಿಠಲ್ ಹೂಗಾರ ಇತರರಿದ್ದರು.

ರಾಗ ಸಂಗೀತ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷರಾದ ದೇವಿಂದ್ರ ಮೇಲಕೆರಿ ಸ್ವಾಗತಿಸಿದರು. ಶಿವಾನಂದ ಮುಂದೇವಾಲ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ನಾಗಲಿಂಗಯ್ಯ ಶಾಸ್ತ್ರೀ ಆಲೂರ ನಿರೂಪಣೆ ಮಾಡಿದರು. ಗುರುಶಾಂತಯ್ಯ ಸ್ಥಾವರಮಠ, ಕಾರ್ತಿಕಯ್ಯ ಸ್ವಾಮಿ ಹಿರೇಮಠ, ಶಿವಕುಮಾರ ಹಿರೇಮಠ, ಓಂಕಾರ ಹಿರೇಮಠ, ಬಸಯ್ಯ ಬಿ.ಗುತ್ತೇದಾರ್, ಬಲಭೀಮ ನೆಲೋಗಿ, ನಾಗಲಿಂಗಯ್ಯ ಸ್ವಾಮಿ, ಮಹಾಲಿಂಗಯ್ಯ ಸ್ವಾಮಿ, ಮಲ್ಲಯ್ಯ ಚಿಕ್ಕಮಠ, ಲಿಂಗಾನಂದ ಚಿಕಮಠ, ಕಲ್ಲಿನಾಥ ಹಿರೇಮಠ, ವೀರಭದ್ರಯ್ಯ ಸ್ಥಾವರಮಠ, ಪರಮೇಶ್ವರ ಕಲಶೆಟ್ಟಿ, ಅವಿನಾಶ ಸಂಪಂಗಿ ಸಂಗೀತ ಸೇವೆ ಸಲ್ಲಿಸಿದರು. ಶೋಭಾ ಕಲಖೋರ ತಾಂಡಾ ಮತ್ತು ತಂಡದವರಿಂದ ಲಂಬಾಣಿ ನೃತ್ಯಸಾದರ ಪಡಿಸಿದರು. ಸಂಜು ಬರಗಲಿ ಕೂಸನೂರ ತಂಡದವರು ಡೊಳ್ಳು ಕುಣಿತ ಪ್ರಸ್ತುತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net