ಹೊಸ ತಾಲೂಕು ಕೇಂದ್ರಕ್ಕೆ ಶಾಸಕರ ಒತ್ತಾಯ

PRESS MEET (1)--01
Published on

  • ಚಿತ್ರದುರ್ಗ: ಚಳ್ಳಕೆರೆ ತಾಲೂಕು ಪರಶುರಾಂಪುರವನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಶಾಸಕ ಟಿ.ರಘುಮೂರ್ತಿ ಸೋಮವಾರ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
  • ಪ್ರಶ್ನೋತ್ತರ ಕಲಾಪದ ವೇಳೆ ಮಾತನಾಡಿದ ಅವರು, ನಾನು 3ನೇ ಬಾರಿಗೆ ಶಾಸಕನಾಗುತ್ತಿದ್ದೇನೆ. ಹಲವು ಬಾರಿ ಈ ಕುರಿತ ನನ್ನ ಹಿಂದಿನ ಪ್ರಶ್ನೆಗಳಿಗೆ ಸಂಬಂಧಿಸಿದ ಸಚಿವರು, ಜಿಲ್ಲಾಧಿಕಾರಿಯಿಂದ ಪ್ರಸ್ತಾವನೆ ಬಂದಿಲ್ಲ ಎಂದು ತಿಳಿಸಿದ್ದಾರೆ.

  • ಎಂ.ಪಿ.ಪ್ರಕಾಶ್ ವರದಿಯಲ್ಲಿ 43 ಹೊಸ ತಾಲೂಕುಗಳ ಪಟ್ಟಿಯಲ್ಲಿ ಪರಶುರಾಂಪುರ ಸೇರಿತ್ತು. ಆದರೆ ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಬೇಡಿಕೆ ಈಡೇರಿಲ್ಲ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರನ್ನು ಒತ್ತಾಯಿಸಿದ್ದಾರೆ. ಈ ಬಾರಿ ತಾಲೂಕು ಕೇಂದ್ರ ಮಾಡದಿದ್ದರೆ ನಾನು ಮತ್ತೆ ಸ್ಪರ್ಧಿಸುವುದಿಲ್ಲವೆಂದು ಕ್ಷೇತ್ರದ ಜನರಿಗೆ ಹೇಳಿದ್ದೇನೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net