

ಹುಮನಾಬಾದ್: ಸ್ಥಳೀಯ ಪುರಸಭೆಯಲ್ಲಿ ಸ್ವಚ್ಛ ಭಾರತ ಯೋಜನೆಯಡಿ ಕಸ ವಿಲೇವಾರಿ ಇತರ ಕಾರ್ಯಕ್ಕಾಗಿ ತಂದಿರುವ ಟ್ರಾö್ಯಕ್ಟರ್‌ನ ಎರಡು ಹೊಸ ಟ್ರಾಲಿಗಳಿಗೆ ಹಳೆಯ ಟೈರ್ ಅಳವಡಿಸಿರುವುದು ಅಕ್ರಮ ಶಂಕೆ ಜತೆಗೆ ಗರಂಗರA ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಟ್ರಾಲಿಗೆ ಬಳಸಿರುವ ಹಳೆಯ ಟೈರ್‌ಗೆ ಗ್ರುಪ್ ಮಾಡಿಸಿ ಬಣ್ಣ ಹಚ್ಚಿರುವ ಹಳೆಯ ಡಿಸ್ಕ್ಗಳನ್ನು ಅಳವಡಿಸಲಾಗಿದ್ದು, ಸಂಬAಧಿತರ ವಿರುದ್ಧ ಕ್ರಮ ಜರುಗಿಸುವಂತೆ ಪುರಸಭೆ ಅಧ್ಯP್ಷÀರು, ಉಪಾಧ್ಯP್ಷÀರು ಹಾಗೂ ಕೆಲ ಸದಸ್ಯರು ದೂರು ಸಲ್ಲಿಸಿ ಮೂರು ವಾರವಾದರೂ ಮೇಲಧಿಕಾರಿಗಳು ಗಮನಹರಿಸದಿರುವುದು ಸಂಶಯಕ್ಕೆ ಕಾರಣವಾಗಿದೆ.
ಹಳೆಯ ಟೈರ್ ಅಳವಡಿಸಿದ ಕುರಿತು ಪುರಸಭೆಯಲ್ಲಿ ಸೆ.30ರಂದು ಅಧ್ಯP್ಷÀ, ಉಪಾಧ್ಯP್ಷÀರು ಮತ್ತು ಕೆಲ ಸದಸ್ಯರು ಮುಖ್ಯಾಧಿಕಾರಿ, ಪರಿಸರ ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡು ಅವ್ಯವಹಾರ ಮಾಡಲಾಗಿದೆ ಎಂದು ಕಿಡಿಕಾರಿದ್ದರು.
ಸುಮಾರು ಐದು ಲP್ಷÀ ರೂ.ಗಳಲ್ಲಿ ತಂದಿರುವ ಎರಡು ಟ್ರಾಲಿಗಳಿಗೆ ಹಾಕಿದ ಟೈರ್ ಗ್ರುಪ್ ಮಾಡಿದ್ದಲ್ಲದೆ ಹಳೆಯ ಡಿಸ್ಕ್ಗಳಿವೆ. ಯಾವ ಸದಸ್ಯರಿಗೂ ಈ ಬಗ್ಗೆ ಮಾಹಿತಿ ಇಲ್ಲ. ಗುತ್ತಿಗೆದಾರನಿಂದ ಹೇಗೆ ಪಡೆದುಕೊಂಡಿದ್ದೀರಿ? ಅಕ್ರಮದಲ್ಲಿ ಅಧಿಕಾರಿಗಳೂ ಶಾಮೀಲಾಗಿದಂತೆ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಲಕ್ಷಾಂತರ ರೂ.ಗಳಲ್ಲಿ ಸ್ವಚ್ಛಗೊಳಿಸುವ ಯಂತ್ರ ಇತರ ವಾಹನಗಳು ಖರೀದಿಸಿರುವ ಬಗ್ಗೆಯೂ ಮಾಹಿತಿ ನೀಡಬೇಕೆಂದು ಒತ್ತಾಯಿಸಿದ್ದರು.
ನನಗೂ ಮಾಹಿತಿ ಇಲ್ಲ. ಭಾನುವಾರ ತಂದು ನಿಲ್ಲಿಸಲಾಗಿದೆ. ವಾಪಸ್ ಕೊಂಡೊಯ್ಯುವAತೆ ಸಂಬAಧಿಸಿದ ಗುತ್ತಿಗೆದಾರನಿಗೆ ತಿಳಿಸುವುದಾಗಿ ಪರಿಸರ ಅಭಿಯಂತರ ವೀರಶೆಟ್ಟಿ ಹೇಳಿರುವುದಕ್ಕೆ ಗರಂ ಆಗಿದ್ದ ಚುನಾಯಿತ ಪ್ರತಿನಿಧಿಗಳು, ಟ್ರಾಲಿ ಸರಬರಾಜು ಮಾಡಿದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿ ಮೂರು ವಾರವಾಗಿದೆ. ಈವರೆಗೆ ಮೇಲಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ ಮತ್ತು ಯಾವುದೇ ಕ್ರಮ ಕೈಗೊಂಡಿಲ್ಲ. ಅಕ್ರಮದ ವಿರುದ್ಧ ಆಡಳಿತ ಮಂಡಳಿ ಸಲ್ಲಿಸಿದ ದೂರಿಗೂ ಅಕಾರಿಗಳು ಕ್ಯಾರೆ ಎನ್ನದಿರುವುದನ್ನು ಗಮನಿಸಿದರೆ ಗೋಲ್ಮಾಲ್ ನಡೆದಿರುವ ಸಂಶಯ ಸಾರ್ವಜನಿಕರಲ್ಲಿ ಕಾಡುತ್ತಿದೆ. ಸಂಬAಧಿತರು ತಕ್ಷಣ ಇತ್ತ ಚಿತ್ತ ಹರಿಸುವರೇ ಕಾದು ನೋಡಬೇಕು.