ಹೊಳೆಯಂತಾದ ಶಿರಸಿ-ಯಲ್ಲಾಪುರ ರಾಜ್ಯ ಹೆದ್ದಾರಿ

12SIRSI3
Published on

ಶಿರಸಿ: ದಶಕಗಳಿಂದ ನೀರು ಹೋಗುತ್ತಿರುವ ಮುಖ್ಯ ಚರಂಡಿ ಕಟ್ಟಿರುವ ಪರಿಣಾಮ ರಸ್ತೆ ಸಂಪೂರ್ಣ ಜಲಾವೃತಗೊಂಡು ಶಿರಸಿ-ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಮೂರು ಗಂಟೆಗೂ ಅಧಿಕ ಕಾಲ ವಾಹನ ಸಂಚಾರ ಸ್ಥಗಿತಗೊಂಡ ಘಟನೆ ಶುಕ್ರವಾರ ನಡೆದಿದೆ.

ನಗರದ ಯಲ್ಲಾಪುರ ರಸ್ತೆಯ ಆಶಾಪ್ರಭು ಆಸ್ಪತ್ರೆ ಬಳಿ ದಶಕಗಳಿಂದರುವ ಗಟಾರವನ್ನು ಖಾಸಗಿ ವ್ಯಕ್ತಿಗಳು ಬಂದ್ ಮಾಡಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಈ ನಡುವೆ ಶುಕ್ರವಾರ ಸುರಿದ ಮಳೆಗೆ ಮರಾಠಿಕೊಪ್ಪ, ವಿದ್ಯಾನಗರ ಮತ್ತಿತರ ಕಡೆಗಳಿಂದ ಬರುವ ಮಳೆ ನೀರು ಮುಂದೆ ಸಾಗದೆ ರಸ್ತೆಯೇ ಗಟಾರದಂತಾಗಿತ್ತು. ಹೀಗಾಗಿ ಯಲ್ಲಾಪುರ ರಸ್ತೆಯ ಅರ್ಬನ್ ಬ್ಯಾಂಕ್ ಬಳಿ ಮೂರು ಗಂಟೆಗೂ ಅಧಿಕ ಕಾಲ ವಾಹನ ಸಂಚಾರ ಸಂಪೂರ್ಣ ಕಡಿತಗೊಂಡಿತ್ತು. ಇಡೀ ಪ್ರದೇಶ ಜಲಾವೃತಗೊಂಡ ಪರಿಣಾಮ ರಸ್ತೆಯಂಚಿನ ಅಂಗಡಿ, ಹೋಟೆಲ್​ಗಳಿಗೆ ನೀರು ನುಗ್ಗಿ ಜನ ಪರದಾಡಿದರು. ಸ್ಥಳಕ್ಕೆ ಸಾರ್ವಜನಿಕರು ಆಗಮಿಸಿ ವಾಹನ ಸಂಚಾರ ತಡೆದು ಸಾಂಕೇತಿಕ ಪ್ರತಿಭಟನೆ ನಡೆಸಿದರು. ಕೂಡಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು.<

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net