ಹೊಳೆನರಸೀಪುರದಲ್ಲಿ‌ ಮನೆ ಮನೆಗೆ ತೆರಳಿ ಹಾಲು ಹಾಕಿದ ಎಚ್.ಡಿ.ರೇವಣ್ಣ!

IMG-20200404-WA0011.jpg
Published on

ಹಾಸನ: ಹಾಮೂಲ್ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಮುಂಜಾನೆ ಹೊಳೆನರಸೀಪುರದಲ್ಲಿ ಮನೆ ಮನೆಗೆ ಹಾಲು ಹಾಕುವ ಮೂಲಕ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಬಡವರಿಗೆ ನೆರವಾದರು.

ಹೊಳೆನರಸೀಪುರ ಪಟ್ಟಣದಲ್ಲಿ ನಿರ್ಗತಿಕರು, ಬಡವರು ವಾಸವಾಗಿರುವ ಪ್ರದೇಶಗಳಿಗೆ ತೆರಳಿ ಪ್ರತಿ ಮನೆಗೆ ಒಂದೊಂದು ಲೀಟರ್ ಹಾಲಿನ ಪ್ಯಾಕೆಟ್ ಹಂಚಿದರು.

ಹೊಳೆನರಸೀಪುರ ತಹಸೀಲ್ದಾರ್ ಶ್ರೀನಿವಾಸ್ ರಿಂದ ಮಾಹಿತಿ ಪಡೆದು ಖುದ್ದಾಗಿ ಮನೆ ಮನೆ ಬಾಗಿಲಿಗೆ ತೆರಳಿ ಹಾಲು ಪ್ಯಾಕೆಟ್ ತಲುಪಿಸಿದರು.

ಕೆಲವಡೆ ಹಾಲಿನ ಕ್ರೇಟ್ ಗಳನ್ನು ಜೋಡಿಸಿಟ್ಟುಕೊಂಡ ರೇವಣ್ಣ, ಜನರನ್ನು ಸಾಲಿನಲ್ಲಿ‌ ನಿಲ್ಲಿಸಿ ಸರದಿ ಪ್ರಕಾರ ಹಾಲು ನೀಡಿದರು.

ಬೆಳ್ಳಂಬೆಳಗ್ಗೆ ತಮ್ಮ ಮನೆಗೆ ಎಚ್.ಡಿ.ರೇವಣ್ಣ ಬಂದಿದ್ದನ್ನು ಕಂಡು ಅಚ್ಚರಿಗೊಂಡ ನಿವಾಸಿಗಳಿಗೆ ತಗಳ್ಳಿ ಹಾಲು ಉಪಯೋಗಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹಾಲಿನ ಪ್ಯಾಕೆಟ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net