ಹೊಳೆನರಸೀಪುರದ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯದಲ್ಲಿ ರಥಸಪ್ತಮಿಯ ಪ್ರಯುಕ್ತ ನೆರವೇರಿತು ಸೂರ್ಯ ಮಂಡಲೋತ್ಸವ

IMG-20200201-WA0004.jpg
Published on

ಹೊಳೆನರಸೀಪುರ: ಪಟ್ಟಣದ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯದಲ್ಲಿ ರಥಸಪ್ತಮಿಯ ಪ್ರಯುಕ್ತ ಶನಿವಾರ ಸೂರ್ಯ ಮಂಡಲೋತ್ಸವ ವನ್ನು ಶ್ರದ್ಧಾಭಕ್ತಿಯಿಂದ ಅದ್ಧೂರಿಯಾಗಿ ನಡೆಸಲಾಯಿತು.

ದೇವಾಲಯದ ಶ್ರೀ ಸ್ವಾಮಿ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ ಮತ್ತು ಮಂಗಳಾರತಿ ನಡೆಸಲಾಯಿತು. ನಂತರ ಉತ್ಸವ ಮೂರ್ತಿಗಳಿಗೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದ ಬಳಿಕ ರಥ ಬೀದಿಯಲ್ಲಿ ಉತ್ಸವ ನೆರವೇರಿತು.

ಉತ್ಸವದ ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ ಪ್ರಸಾದ ವಿನಿಯೋಗ ನಡೆಸಲಾಯಿತು.

ಉತ್ಸವದಲ್ಲಿ ಪ್ರವೀಣ್ ಕುಮಾರ್, ಯಶೋಧ, ರಜಾ ರಮಣಿ, ಪ್ರದೀಪ್, ಶ್ರುತಿ, ಎಚ್.ಆರ್.ಸಿಂಹಾದ್ರಿ, ವೆಂಕಟೇಶ,ಎಂ.ಜೆ.ರವಿಚಂದ್ರ, ವೆಂಕಟೇಶ, ಶಾಂತರಾಜು ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net