ಹೊಳೆನರಸೀಪುರ ಅಭಿವೃದ್ಧಿಗೆ ಸರ್ಕಾರ ನಯಾಪೈಸೆ ನೀಡಿಲ್ಲ

IMG_20241125_105712
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: 32768; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
Published on

ಹೊಳೆನರಸೀಪುರ: ರಾಜ್ಯ ಸರ್ಕಾರ ಹೊಳೆನರಸೀಪುರ ಪಟ್ಟಣ ಪುರಸಭೆ ಅಭಿವೃದ್ಧಿಗೆ ಒಂದು ರೂ. ಸಹ ನೀಡಿಲ್ಲ. ರಾಜ್ಯ ಸರ್ಕಾರ ಸೇಡಿನ ಮನೋಭಾವನೆಯಿಂದ ವರ್ತಿಸುತ್ತಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ಕಿಡಿಕಾರಿದರು.

ರಾಜ್ಯ ಸರ್ಕಾರ ಅಭಿವೃದ್ದಿಗೆ ಹಣ ನೀಡುತ್ತಿಲ್ಲವೆಂದು ಪಟ್ಟಣದ ಪುರಸಭೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದಲ್ಲಿ ಪುರಸಭೆ ಕುಡಿಯುವ ನೀರಿನ ಸಲುವಾಗಿ ಕೇವಲ 1.5 ಲಕ್ಷ ರೂ.ಬಿಟ್ಟರೆ ಮತ್ತೇನು ನೀಡಿಲ್ಲ. ಕೇಂದ್ರ ಸರ್ಕಾರದಿಂದ 1.41 ಕೋಟಿ ರೂ. ಬಂದಿರುವುದು ಬಿಟ್ಟರೆ ಮತ್ತೇನು ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಿಎಚ್ ರಸ್ತೆ ಕಾಮಗಾರಿ ಒಂದು ವಾರದೊಳಗೆ ಆರಂಭವಾಗಲಿದೆ. ಪಟ್ಟಣದ ಬಿಎಚ್‌ರಸ್ತೆ ಅಭಿವೃದ್ಧಿಗೆ 27 ಕೋಟಿ ರೂ. ಈ ಹಿಂದೆ ಕುಮಾರಸ್ವಾಮಿ ಅವರು ಇದ್ದ ಕಾಲದಲ್ಲಿ ತಂದಿರುವ ಹಣವೆಂದು ತಿಳಿಸಿ ಈ ಕಾಮಗಾರಿ ಗುತ್ತಿಗೆ ಕಾರ್ಯ ಮುಗಿದಿದ್ದು ಇನ್ನೊಂದು ವಾರದಲ್ಲಿ ಚನ್ನಾಂಬಿಕಾ ಪಾರ್ಕಿಂಗ್ ಕನಕ ಭವನದವರೆಗಿನ ರಸ್ತೆಯನ್ನು ಅಭಿವೃದ್ದಿಪಡಿಸಲಾಗುವುದೆಂದು ಮಾಹಿತಿ ನೀಡಿದರು.

ಪ್ರಸ್ತುತ ಹೊಳೆನರಸೀಪುರದ ಶ್ರೀರಾಮದೇವರ ಅಣೆಕಟ್ಟೆ ಬಳಿ ಒಂದು ಮೇಲ್ಸೇತುವೆ, ಶ್ರವಣೂರು ಸಮೀಪ ಮತ್ತೊಂದು ಮೇಲ್ಸೇತುವೆಗೆ ಅನುಮೂಧನೆ ದೊರೆತಿದೆ. 530 ಕೋಟಿ ರೂ. ವೆಚ್ಚದಲ್ಲಿ 13 ಕಿ.ಮಿ. ರಿಂಗ್ ರಸ್ತೆ ನಿರ್ಮಾಣವಾಗಲಿದೆ ಎಂದರು.

ಹೊಳೆನರಸೀಪುರದ ಸುತ್ತ ರಿಂಗ್ ರಸ್ತೆಗೆ 530 ಕೋಟಿ ರೂ. ಹಣ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲು ಡಿ. 9 ರಂದು ಕಡೆಯ ದಿನವಾಗಿದೆ. ಈ ರಿಂಗ್ ರಸ್ತೆ ಸುಮಾರು 13 ಕಿ.ಮೀ. ಉದ್ದವಿದ್ದು, ಅತೀ ಶೀಘ್ರವಾಗಿ ಈ ಕಾಮಗಾರಿ ಆರಂಭವಾಗಿ ಕಾಮಗಾರಿ ಪೂರ್ಣಗೊಂಡರೆ ಹೊಳೆನರಸೀಪುರ ಪಟ್ಟಣ ವಿಸ್ತರ್ಣೆಗೊಳ್ಳುವ ಜತೆಗೆ ಅಭಿವೃದ್ಧಿ ಪಥದಲ್ಲಿ ಸಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕಂದಾಯದ ಹಣ ಅಭಿವೃದ್ಧಿಗೆ ಬಳಕೆ ಮಾಡಲಾಗುವುದು. ಪಟ್ಟಣದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹಣ ನೀಡದ ಕಾರಣ ಪುರಸಭೆಯಲ್ಲಿ ವಸೂಲಿ ಆಗುವ ಕಂದಾಯದ ಹಣವನ್ನು ಪಟ್ಟಣದ 23 ವಾರ್ಡುಗಳಿಗೂ ಸಮಾನವಾಗಿ ಹಂಚಿ ಪಟ್ಟಣದ ಕೆಲಸ ಕಾರ್ಯಗಳನ್ನು ಮಾಡುವುದು ಅನಿವಾರ್ಯವಾಗಿದೆ. ಆದ್ದರಿಂದ ಪುರಸಭೆಗೆ ಬರುವ ಕಂದಾಯ ಮತ್ತಿತರೆ ಹಣವನ್ನು ಅಭಿವೃದ್ದಿ ಬಳಸಿ ನಗರದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದರು.

ಒಳಚರಂಡಿ ಯೋಜನೆಗೆ 90 ಕೋಟಿ ರೂ.: ಪಟ್ಟಣದಲ್ಲಿ ಒಳಚರಂಡಿ ಯೋಜನೆ ಬಂದು 52 ವರ್ಷಗಳೆ ಕಳೆದಿದೆ. ಆದರೆ ಹೊಸ ಬಡಾವಣೆಗಳು ಇದ್ದು, ಅವುಗಳಿಗೂ ಮೂಲ ಸೌಕರ್ಯ ಕಲ್ಪಿಸುವ ಒಳಚರಂಡಿ ಕಾಮಗಾರಿ ನಡೆಸಲು ರಾಜ್ಯ ಸರ್ಕಾರಕ್ಕೆ ಎರಡು ವರ್ಷಗಳ ಹಿಂದೆ 90 ಕೋಟಿ ರೂ. ಅನುದಾನಬೇಕು ಎಂದು ಕೇಳಲಾಗಿತ್ತು. ಆದರೆ ಎರಡು ವರ್ಷಗಳಾದರೂ ಸಹ ಒಂದು ನಯಾ ಪೈಸೆಯನ್ನು ನೀಡದಿರುವುದು ಕಾಮಗಾರಿ ನಡೆಸದಂತಾಗಿದೆ ಎಂದರು.

ಬಡವರ ನಿವೇಶನ ಹಂಚಿಕೆಗೆ 3700 ಅರ್ಜಿ ಬಂದಿದೆ. ಪಟ್ಟಣದಲ್ಲಿ ನಿವೇಶನ ಇಲ್ಲವೆಂದು ಸುಮಾರು 3700 ಅರ್ಜಿಗಳು ಬಂದಿದೆ. ನಿವೇಶನ ಇಲ್ಲದವರಿಗೆ ನಿವೇಶನ ನೀಡುವ ಸಲುವಾಗಿ ಭೂಸ್ವಾಧಿನ ಪ್ರಕ್ರಿಯೆಯನ್ನು ನಡೆಸಿ ಈ ಅರ್ಜಿಗಳಿಗೆ ನಿವೇಶನ ನೀಡುವ ಯೋಜನೆಗೆ ಸದ್ಯದಲ್ಲೆ ಚಾಲನೆ ನೀಡುವುದಾಗಿ ತಿಳಿಸಿದರು.

ಅಪೂರ್ಣ ಚರ್ಚೆಯಲ್ಲೇ ಮುಕ್ತಾಯ

ಈ ದಿನ ಪುರಸಭೆ ಸಾಮಾನ್ಯ ಸಭೆಯಲ್ಲಿ ಹಲವಾರು ವಿಷಯಯಗಳು ಇದ್ದರೂ ಯಾವ ವಿಷಯಗಳು ಪರಿಪೂರ್ಣವಾಗಿ ಚರ್ಚೆ ನಡೆಯದೆ ಸಭೆಯಲ್ಲಿ ಹಾಜರಿದ್ದ ಸದಸ್ಯರುಗಳು ತಲೆ ಅಲ್ಲಾಡಿಸಿದ್ದು ಬಿಟ್ಟರೆ ಯಾವುದೆ ಗಹನ ಚರ್ಚೆ ನಡೆಯದೆ ಮುಕ್ತಾಯಗೊಂಡಿತು. ಹದಿನಾಲ್ಕು ಮಂದಿ ಸದಸ್ಯರು ಹಾಜರಿದ್ದರು. ಇಂದಿನ ಸಾಮಾನ್ಯ ಸಭೆಗೆ ಶಾಸಕ ರೇವಣ್ಣ ಅವರ ಬರಲಿದ್ದಾರೆ ಎಂದು ಮೊದಲೆ ಮಾಹಿತಿ ಇದ್ದರೂ ಸಹ ಇರುವ 23 ಸದಸ್ಯರುಗಳಲ್ಲಿ ಕೇವಲ 14 ಮಂದಿ ಮಾತ್ರ ಹಾಜರಾಗಿದ್ದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆ.ಶ್ರೀಧರ್ ಅವರು ನಾಮ್ ಕೇ ವಾಸ್ತೆ ಅಧ್ಯಕ್ಷರು ಎಂಬಂತೆ ಕುಳಿತು ಶಾಸಕರ ಮಾತಿಗೆ ತಲೆ ಅಲ್ಲಾಡಿಸಿದ್ದು ಬಿಟ್ಟರೆ ಮತ್ತೇನು ಮಾಡಲಾಗಲಿಲ್ಲ. ಇನ್ನು ಮುಖ್ಯಾಧಿಕಾರಿ ನಾಗೇಂದ್ರಕುಮಾರ್‌ಒಂದೆರಡು ವಿಷಯಗಳನ್ನು ಶಾಸಕರ ಗಮನಕ್ಕೆ ತಂದ್ದಿದ್ದರಿಂದ ಶಾಸಕ ರೇವಣ್ಣ ಅವರು ಸಮಜಾಯಿಸಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net