ಹೊಳೆ ದಾಟಿ ಶವಸಂಸ್ಕಾರ!

29 HANUR 4 (1)
ಅಂಬಿಕಾಪುರದಲ್ಲಿ ಆದಿಜಾಂಬವ ಸಮುದಾಯಕ್ಕೆ ಸ್ಮಶಾನ ವ್ಯವಸ್ಥೆ ಇಲ್ಲದ ಪರಿಣಾಮ ಗ್ರಾಮಸ್ಥರು ಶವವನ್ನು ಉಡುತೊರೆ ಹಳ್ಳದಲ್ಲಿ ಹೊತ್ತೋಯ್ದು ಅಂತ್ಯ ಸಂಸ್ಕಾರ ನಡೆಸಿದರು.
Published on

ಅಂಬಿಕಾಪುರ ಗ್ರಾಮದಲ್ಲಿ ಸಂಕಷ್ಟ

ಹನೂರು: ತಾಲೂಕಿನ ಅಂಬಿಕಾಪುರ ಗ್ರಾಮದಲ್ಲಿ ಆದಿಜಾಂಬವ ಸಮುದಾಯಕ್ಕೆ ಸ್ಮಶಾನ ವ್ಯವಸ್ಥೆ ಇಲ್ಲದ ಪರಿಣಾಮ ಶನಿವಾರ ಮೃತಪಟ್ಟ ಮಹಿಳೆಯ ಶವವನ್ನು ಗ್ರಾಮಸ್ಥರು ಉಡುತೊರೆ ಹಳ್ಳದಲ್ಲಿ ಹೊತ್ತೊಯ್ದು ಶವಸಂಸ್ಕಾರ ನೆರವೇರಿಸಿದರು.

ಗ್ರಾಮದಲ್ಲಿ ಆದಿಜಾಂಬವ ಹಾಗೂ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸ್ಮಶಾನ ವ್ಯವಸ್ಥೆ ಇಲ್ಲ. ಇದರಿಂದ ಮೃತಪಟ್ಟವರನ್ನು ಉಡುತೊರೆ ಹಳ್ಳದ ಸಮೀಪದಲ್ಲಿ ಶವಸಂಸ್ಕಾರವನ್ನು ನೆರವೇರಿಸಲಾಗುತ್ತಿದ್ದು, ತುಂಬಾ ತೊಂದರೆ ಅನುಭವಿಸಲಾಗುತ್ತಿದೆ. ಸ್ಮಶಾನ ಸೌಕರ್ಯ ಒದಗಿಸುವಂತೆ ಗ್ರಾಮಸ್ಥರು ಸಂಬಂಧಪಟ್ಟವರಲ್ಲಿ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಈತನ್ಮಧ್ಯೆ ಶನಿವಾರ ಮೃತಪಟ್ಟ ಪಳನಿಯಮ್ಮ ಅವರ ಮೃತದೇಹವನ್ನು ಗ್ರಾಮಸ್ಥರು ಯಥೇಚ್ಛವಾದ ನೀರು ಹರಿಯುತ್ತಿರುವ ಉಡುತೊರೆ ಹಳ್ಳದಲ್ಲಿ ಹೊತ್ತೊಯ್ದು ಶವಸಂಸ್ಕಾರ ನೆರವೇರಿಸಿ ತೊಂದೆರೆ ಅನುಭವಿಸಿದರು.

ಈ ಬಗ್ಗೆ ಗ್ರಾಮಸ್ಥರು ಮಾತನಾಡಿ, ನಮ್ಮ ಸಮುದಾಯಕ್ಕೆ ಸ್ಮಶಾನ ವ್ಯವಸ್ಥೆ ಇಲ್ಲ. ಇದರಿಂದ ಮೃತಪಟ್ಟವರನ್ನು ಉಡುತೊರೆ ಹಳ್ಳದ ಸಮೀಪವೇ ಅಂತ್ಯ ಸಂಸ್ಕಾರವನ್ನು ನೆರವೇರಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಇನ್ನು ಮಳೆಗಾಲದ ವೇಳೆ ಹಳ್ಳದಲ್ಲಿ ಯಥೇಚ್ಛವಾದ ನೀರು ಹರಿಯುವುದರಿಂದ ವಿಧಿಯಿಲ್ಲದೇ ಹಳ್ಳವನ್ನು ದಾಟಿಕೊಂಡು ಹೋಗಬೇಕಾದ ಅನಿವಾರ್ಯತೆ ಇದ್ದು, ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದೇವೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇನ್ನು ಮುಂದಾದರೂ ಇತ್ತ ಗಮನಹರಿಸಿ ನಮಗೆ ಯಾವುದೇ ಸೌಲಭ್ಯ ನೀಡದಿದ್ದರೂ ಪರವಾಗಿಲ್ಲ. ಮೊದಲು ಸ್ಮಶಾನ ಸೌಕರ್ಯ ಕಲ್ಪಿಸಿಕೊಡುವಂತೆ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net