

ಹೊಳಲ್ಕೆರೆ: ಪಟ್ಟಣದ 5, 7, 9, 10, 14, 15, 16ನೇ ವಾರ್ಡ್‌ಗಳಲ್ಲಿ ಶನಿವಾರ ಪುರಸಭೆ ವತಿಯಿಂದ ಸ್ವಚ್ಛತಾ ಜಾಗೃತಿ ಜಾಥಾ ಹಾಗೂ ಸಭೆ ಆಯೋಜಿಸಲಾಗಿತ್ತು.
ಶುದ್ಧ ನೀರು, ಸ್ವಚ್ಛತೆಗೆ ಆದ್ಯತೆ ನೀಡದಿದ್ದರೆ ವಿವಿಧ ರೋಗಗಳಿಂದ ಬಳಲಬೇಕಾಗುತ್ತದೆ. ಆದ್ದರಿಂದ ಮನೆ ಸುತ್ತಲ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರಿನ ಟ್ಯಾಂಕ್‌ಗಳನ್ನು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕು. ನೀರನ್ನು ಕಾಯಿಸಿ, ಆರಿಸಿ ಕುಡಿಯಬೇಕು ಎಂದು ಪುರಸಭೆ ಸದಸ್ಯರು, ಅಧಿಕಾರಿಗಳು ತಿಳಿಸಿದರು.
ಮಂಜುನಾಥ ಸ್ವಾಮಿ ಪ್ರೌಢಶಾಲೆ ಹಾಗೂ ಎಸ್‌ಜೆಎಂ ಪ್ರೌಢಶಾಲೆ ಮತ್ತು ಮೆಟ್ರಿಕ್ ಪೂರ್ವ ಬಾಲಕೀಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಲ್ಲಿ ಜಾಥಾ ನಡೆಸಿ ಜಾಗೃತಿ ಮೂಡಿಸಿದರು. ಮನೆ ಮನೆಗೆ ತೆರಳಿ ಕರಪತ್ರ ವಿತರಿಸಿದರು.
ಪುರಸಭೆ ಸದಸ್ಯರಾದ ವಿಜಯಸಿಂಹ ಖಾಟ್ರೋತ್, ಕೆ.ಸಿ.ರಮೇಶ್, ಪಿ.ಎಚ್.ಮುರುಗೇಶ್, ಶಬೀನಾ ಅಶ್ರಫ್ ವುಲ್ಲಾ, ಸವಿತಾ ನರಸಿಂಹ ಖಾಟ್ರೋತ್, ಸುಧಾ ಬಸವರಾಜ್, ವಸಂತಾ ರಾಜಪ್ಪ, ಸಿಬ್ಬಂದಿ ನೀಲಕಂಠಚಾರ್, ಮಹಮ್ಮದ್ ಶೌಕತ್, ನಾಗಭೂಷಣ್ ಕಿಶೋರ್, ಶಿವಕುಮಾರ್ ಇದ್ದರು.