

ಕಬ್ಬೂರ: ಹೊಲಿಗೆ ಯಂತ್ರವು ಮಹಿಳೆಯರ ಆರ್ಥಿಕ ಮಟ್ಟ ಸುಧಾರಿಸಲು ಅನುಕೂಲವಾಗಲಿದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ಸ್ಥಳೀಯ ಪಟ್ಟಣ ಪಂಚಾಯಿತಿ ಕಟ್ಟಡ ಹಾಗೂ ಬಸ್ ತಂಗುದಾಣ ಉದ್ಘಾಟನೆ ಹಾಗೂ ಅಂಗವಿಕಲರಿಗೆ ತ್ರಿಚಕ್ರ ವಾಹನ ಹಾಗೂ ಹೊಲಿಗೆ ಯಂತ್ರಗಳನ್ನು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಜತೆಗೂಡಿ ಫಲಾನುಭವಿಗಳಿಗೆ ಸೋಮವಾರ ಹಸ್ತಾಂತರಿಸಿ ಮಾತನಾಡಿದರು. ಹೊಲಿಗೆ ಯಂತ್ರದ ಸಹಾಯದಿಂದ ಮಹಿಳೆಯರು ಜೀವನ ಜೀವನ ಕಟ್ಟಿಕೊಂಡು ಸ್ವಾವಲಂಬಿಗಳಾಗಲು ಪ್ರಯತ್ನಿಸಬೇಕು ಎಂದರು.
ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ಚಿಕ್ಕೋಡಿಯ ಲೋಕಸಭಾ ಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಗ್ರಾಮಸ್ಥರು ಕಬ್ಬೂರು ಪಟ್ಟಣಕ್ಕೆ ವಿವಿಧ ಕಾಲೇಜು, ಹೈಟೆಕ್ ಬಸ್ ನಿಲ್ದಾಣ ಸೇರಿ ೧೪ ಬೇಡಿಕೆ ಸಲ್ಲಿಸಿದ್ದಾರೆ. ಅವುಗಳನ್ನು ಸಾಧ್ಯವಾದಷ್ಟು ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುವುದು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ, ಶಿವು ಪಾಟೀಲ, ಉದಯ ರಜಪೂತ, ಹಿರಾ ಶುಗರ್ಸ್ ನಿರ್ದೇಶಕ ಸುರೇಶ ಬೆಲ್ಲದ, ಪಿಕೆಪಿಎಸ್ ಅಧ್ಯಕ್ಷ ಮಿಲನ ಪಾಟೀಲ, ಪುಟ್ಟು ಪಾಟೀಲ, ಸಿದ್ರಾಮ ಹಿರೇಕುರಬರ, ಡಾ.ಜಯಾನಂದ ಕಪಲಿ, ಜಮೀರ್ ಮಕಾನದಾರ, ಮಂಜು ಘೇವಾರಿ, ಅಬ್ಬಾಸ್ ನದಾಫ್, ಮುಖ್ಯಾಧಿಕಾರಿ ಹಾಲಸಿದ್ದ ಸುಳ್ಳನವರ, ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಮಂಗಿ, ಹನುಮಂತ ಕರಿಕಟ್ಟಿ, ಸುನೀಲ ಇನಾಮದಾರ, ಮಂಜು ಮುರಾಳೆ, ನಾಮದೇವ ಹಿರೇಕುಡಿ, ಹೃತಿಕ್ ಗೊಂಧಳಿ, ರಾಜಕುಮಾರ ಕೋಟಗಿ, ಎಸ್.ಆರ್.ಕುಂದರಗಿ ಇತರರಿದ್ದರು.