ಹೊಲಕ್ಕೆ ನೀರು ನುಗ್ಗಿ ಬೆಳೆ ಹಾನಿ

Oplus_0
ಮಳೆಯಿಂದಾಗಿ ಬಟಗೇರಾ-ಕೋಹಿನೂರು ಪಹಾಡ ರಸ್ತೆಯ ಸೇತುವೆಗೆ ಹಾನಿಯಾಗಿವುದು.
Published on

ಬಸವಕಲ್ಯಾಣ: ಕೋಹಿನೂರ ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಕೋಹಿನೂರು, ಲಾಡವಂತಿ, ಬಟಗೇರಾ, ಎಕ್ಕಂಬಾ ಗ್ರಾಮಗಳ ವ್ಯಾಪ್ತಿಯಲ್ಲಿ ನಾಲಾ ಪಕ್ಕದ ಹೊಲಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.

ಕೋಹಿನೂರ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ೫೬.೬ ಎಂಎಂ ಮಳೆಯಾಗಿರುವ ಬಗ್ಗೆ ವರದಿಯಾಗಿದ್ದು, ನಾಲಿಗಳು ತುಂಬಿ ಹರಿದು ನಾಲೆ ಪಕ್ಕದ ಹೊಲಗಳಿಗೆ, ತೋಟಗಳಿಗೆ ನೀರು ನುಗ್ಗಿ ಹಾನಿಯಗಿದೆ.

ಕೋಹಿನೂರು, ಲಾಡವಂತಿ, ಬಟಗೇರಾ, ಎಕ್ಕಂಬ ಗ್ರಾಮಗಳ ವ್ಯಾಪ್ತಿಯ ನಾಲೆ ಪಕ್ಕದಲ್ಲಿರುವ ಹೊಲಗಳಲ್ಲಿ ನೀರು ನುಗ್ಗಿ ಬೆಳೆ ಹಾನಿಯಗಿದ್ದು, ಕೆಲ ಹೊಲಗಳಲ್ಲಿ ನೀರು ನಿಂತಿರುವುದು ಕಂಡು ಬಂತು. ಸೋಯಾ, ತೊಗರಿ ಹಾಗೂ ಕೆಲವೆಡೆ ತೋಟಗಾರಿಕೆ ಬೆಳೆ ಹಾನಿಯಾಗಿದೆ.

ಭೇಟಿ: ಕೃಷಿ ಸಹಾಯಕ ನಿರ್ದೇಶಕ ಗೌತಮ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ವೈಜಂತಾ ಸಿಬ್ಬಂದಿ ಜತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದರು.

ಸೇತುಗೆ ಹಾನಿ: ಬಟಗೇರಾ-ಕೋಹಿನೂರು ಪಹಾಡ ರಸ್ತೆಯ ಸೇತುವೆ ಮೇಲೆ ನೀರು ಹರಿದು ಹೋಗಿದ್ದು, ನೀರಿನ ರಭಸಕ್ಕೆ ಸೇತುವೆಗೆ ಧಕ್ಕೆಯಾಗಿದ್ದು, ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯರು ಸಮಸ್ಯೆ ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net