ಹೊರೆಕಾಣಿಕೆ ಸಮರ್ಪಣೆ

kls kanikey
ಕಳಸ ಸವಿತಾ ಭಂಡಾರಿ ಸಮಾಜದಿಂದ ಕಲಶೇಶ್ವರ ಜಾತ್ರಾಮಹೋತ್ಸವಕ್ಕೆ ಹೊರೆ ಕಾಣಿಕೆ ಸಮರ್ಪಿಸಲಾಯಿತು.
Published on

ಕಳಸ: ಸವಿತಾ ಭಂಡಾರಿ ಸಮಾಜದಿಂದ ಸವಿತಾ ಮಹರ್ಷಿ ಜಯಂತ್ಯುತ್ಸವ ಹಾಗೂ ಕಳಸ ಕಲಶೇಶ್ವರ ಜಾತ್ರಾ ಮಹೋತ್ಸವಕ್ಕೆ ಹೊರೆ ಕಾಣಿಕೆ ಸಮರ್ಪಿಸಲಾಯಿತು.

ಸವಿತಾ ಸಮಾಜದವರು ಮಹರ್ಷಿ ಜಯಂತ್ಯುತ್ಸವ ಆಚರಿಸಿ ನಂತರ ಕಲಶೇಶ್ವರ ದೇವಸ್ಥಾನಕ್ಕೆ ತೆರಳಿ ಅಕ್ಕಿ, ತರಕಾರಿ, ದಿನಸಿ ಸಾಮಗ್ರಿಗಳನ್ನು ಹೊರೆಕಾಣಿಕೆ ರೂಪದಲ್ಲಿ ಸಮರ್ಪಿಸಿದರು. ಸವಿತಾ ಸಮಾಜದ ಅಧ್ಯಕ್ಷ ಮೋಹನ್ ಭಂಡಾರಿ, ಗೌರವಾಧ್ಯಕ್ಷ ಕೃಷ್ಣ ಭಂಡಾರಿ, ಕಾರ್ಯದರ್ಶಿ ರಾಘವೇಂದ್ರ ಭಂಡಾರಿ, ಜಗದೀಶ್ ಭಂಡಾರಿ, ಯಶಸ್ವಿನಿ ಮಹಿಳಾ ಭಂಡಾರಿ ಸಂಘದ ಅಧ್ಯಕ್ಷೆ ವನಜಾ ಭಂಡಾರಿ ಹಾಗೂ ಸಂಘದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net