ಹೊರಗುತ್ತಿಗೆ ನೌಕರರಿಗೆ ಸಮರ್ಪಕ ವೇತನ ನೀಡಿ

Aduge
Published on

ಕಲಬುರಗಿ: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ನಾಲ್ಕೈದು ತಿಂಗಳ ವೇತನ ಪಾವತಿಸಿಲ್ಲ. ಇದರಿಂದ ನೌಕರರು ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಸಮರ್ಪಕ ವೇತನ ಪಾವತಿಸಬೇಕು ಎಂದು ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಆಗ್ರಹಿಸಿದರು.

ಸರ್ಕಾರದಿಂದ ೩.೬೪ ಕೋಟಿ ಅನುದಾನ ಬರಬೇಕಿದೆ. ಚಿಂಚೋಳಿ ತಾಲೂಕಿನ ಒಂಟಿಚಿAತಾ ಪಾಲತ್ಯಾತಾಂಡ ಸೇರಿ ಮೂರು ಆಶ್ರಮ ಶಾಲೆಯ ನೌಕರರಿಗೆ ೧೮ ತಿಂಗಳಿಂದ ವೇತನ ಪಾವತಿಸಿಲ್ಲ. ಈ ಶಾಲೆಗಳ ೩೩ ಲಕ್ಷ ಅನುದಾನ ಪಡೆದ ಏಜೆನ್ಸಿಯವರು ತಿಂಗಳಾದರೂ ವೇತನ ಪಾವತಿಸುತ್ತಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಏಜೆನ್ಸಿಯವರು ಪ್ರತಿ ತಿಂಗಳು ಇಎಸ್‌ಐ, ಎಪಿಎಫ್‌ಗಳನ್ನು ಸರಿಯಾಗಿ ಪಾವತಿಸುತ್ತಿಲ್ಲ, ಪ್ರತಿ ತಿಂಗಳು ಕಡಿಮೆ ವೇತನ ನೀಡಲಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ, ಕಾರ್ಮಿಕ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಗೆ ದೂರು ನೀಡಿದರೂ ಸ್ಪಂದಿಸಿಲ್ಲ. ಇಂತಹ ಭ್ರಷ್ಟ ಏಜೆನ್ಸಿಗೆ ಬೆಂಬಲಕ್ಕೆ ನಿಂತು ಪುನಃ ಮುರಾರ್ಜಿ ದೇಸಾಯಿ, ಕಿತ್ತೂರ ರಾಣಿ ವಸತಿ ನಿಲಯಗಳ ನೌಕರರಿಗೆ ವೇತನ ಪಾವತಿಗೆ ಮುಂದುವರಿಸಿದ್ದು, ಖಂಡನೀಯ ಎಂದರು.
ಬಿಸಿಎA, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನೌಕರರಿಗೆ ವೇತನ ನೀಡಿಲ್ಲ. ಹೊರಗುತ್ತಿಗೆ ನೌಕರರು ಅತ್ಯಂತ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದು, ಸರ್ಕಾರ ಕೂಡಲೇ ಗಮನ ಹರಿಸಿ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾರ್ಯದರ್ಶಿ ಕಾಶೀನಾಥ ಬಂಡಿ, ಪರಶುರಾಮ ಹಡಗಲಿಗಿ, ಮೇಘರಾಜ ಖಠಾರೆ, ಮಾರುತಿ ಚವ್ಹಾಣ್, ಮಂಜುಳಾಬಾಯಿ ರಾಠೋಡ್, ಲಲಿತಾಬಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net