ಹೊರಗಿನಿಂದ ಬಂದವರ ಮೇಲೆ ನಿಗಾ ವಹಿಸಿ

KAPIL MOHAN
Published on

ಕಲಬುರಗಿ: ಜಿಲ್ಲೆಯಲ್ಲಿ ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಹೊರ ರಾಜ್ಯ ಮತ್ತು ಜಿಲ್ಲೆಯಿಂದ ಬರುವವರ ಮೇಲೆ ತೀವ್ರ ನಿಗಾ ವಹಿಸಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಸಕರ್ಾರದ ಪ್ರಧಾನ ಕಾರ್ಯದರ್ಶಿಯೂ ಆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್ ಮೋಹನ್ ಸೂಚಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಕರೊನಾ ನಿಯಂತ್ರಣ ಕುರಿತು ಪರಿಶೀಲನಾ ಸಭೆ ನಡೆಸಿದ ಅವರು, ಜಿಲ್ಲೆಯ ಗಡಿಗಳಲ್ಲಿ ತಪಾಸಣಾ ಕೇಂದ್ರ ತೆರೆದು ಜ್ವರ ಸೇರಿ ಸೋಂಕಿನ ಲಕ್ಷಣ ಪರೀಕ್ಷಿಸಬೇಕು. ಬಳಿಕ ಅವರನ್ನು 28 ದಿನ ಕ್ವಾರಂಟೈನ್ನಲ್ಲಿ ಇಡಬೇಕು. ತೆಲಂಗಾಣದಲ್ಲಿರುವ ಜಿಲ್ಲೆ ಜನತೆಗೆ ಅಲ್ಲಿನ ಸರ್ಕಾರ ಪಾಸ್ ಕೊಟ್ಟು ಕಳುಹಿಸುತ್ತಿದೆ. ಗಡಿಯಲ್ಲಿ ಇವರೆಲ್ಲರನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಸೂಚಿಸಿದರು.
ಹೊರಗಡೆಯಿಂದ ಬಂದ 5000 ಮಂದಿಗೆ ಅಜೀಂ ಪ್ರೇಮ್ಜಿ ಫೌಂಡೇಷನ್ನಿಂದ ಆಹಾರ ಸಾಮಗ್ರಿ ಕಿಟ್ ನೀಡಲಾಗಿದೆ ಎಂದು ಜಿಪಂ ಸಿಇಒ ಡಾ.ಪಿ.ರಾಜಾ ಮಾಹಿತಿ ನೀಡಿದಾಗ, ಜಿಲ್ಲಾಡಳಿತದಿಂದ ಇಂತಹ ಜನರಿಗೆ ತಾಲೂಕುವಾರು ತಲಾ 5 ಕೆಜಿ ಆಹಾರ ಸಾಮಗ್ರಿ ಕಿಟ್ ನೀಡಬೇಕು. ಕರೊನಾ ವಾರಿಯರ್ಸಗಳಾದ ವೈದ್ಯರು, ಸಹಾಯಕ ಸಿಬ್ಬಂದಿ, ನರ್ಸ ಹಾಗೂ ದಾಖಲಾಗಿರುವ ರೋಗಿಗಳಿಗೆ ಪೌಷ್ಟಿಕ ಆಹಾರ ನೀಡಬೇಕು. ಊಟ ಮತ್ತು ಉಪಾಹಾರದ ವಿವರ ನಿತ್ಯ ಬೋರ್ಡನಲ್ಲಿ ಪ್ರದರ್ಶಿಸಬೇಕು ಎಂದು ಕಪಿಲ್ ಮೋಹನ್ ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಎ. ಜಬ್ಬಾರ್ ಮಾತನಾಡಿ, ಗುಣಮಟ್ಟದ ಆಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ನಿನ್ನೆ ಸ್ವತಃ ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರು ಪರಿಶೀಲಿಸಿದ್ದಾರೆ ಎಂದರು.
ಮನೆ-ಮನೆ ಸರ್ವೇ : ನಗರದಲ್ಲಿ ಗುರುವಾರದಿಂದ 19,540 ಮನೆ ಸಮೀಕ್ಷೆ ಮಾಡಲಾಗಿದೆ. 6,03,251 ಜನಸಂಖ್ಯೆ ಇದ್ದು, ಈವರೆಗೆ ಸುಮಾರು ಒಂದೂವರೆ ಲಕ್ಷ ಜನರ ಸರ್ವೇ ನಡೆದಿದೆ. ಶ್ವಾಸಕೋಶ ತೊಂದರೆ, ಉಬ್ಬಸ-ಎಸ್ಎಆರ್ಐ, ಜ್ವರ, ಕೆಮ್ಮು, ನೆಗಡಿ-ಐಎಲ್ಐ, ಸಕ್ಕರೆ ಕಾಯಿಲೆ, ಬಿಪಿ, ಕಿಡ್ನಿ ಮುಂತಾದ ಸಮಸ್ಯೆ ಇರುವ ರೋಗಿಗಳ ವಿವರ ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾ ಸರ್ಜನ್ ಡಾ.ಎ.ಎಸ್. ರುದ್ರವಾಡಿ ತಿಳಿಸಿದರು.
ಜಿಲ್ಲೆಯಲ್ಲಿ 23 ಜ್ವರ ತಪಾಸಣಾ ಕೇಂದ್ರಗಳಿದ್ದು, ಈ ಪೈಕಿ ನಗರದಲ್ಲಿ 15 ಇವೆ. 581 ಮಂದಿ ತಪಾಸಣೆ ನಡೆಸಿದ್ದು, ನಾಲ್ವರಲ್ಲಿ ಕರೊನಾ ಸೋಂಕು ಪತ್ತೆಯಾಗಿತ್ತು. ಈವರೆಗೆ 981 ಶ್ವಾಸಕೋಶ (ಉಸಿರಾಟ)ದ ತೊಂದರೆ ಇರುವವರನ್ನು ಗುರುತಿಸಿದ್ದು, ಎಲ್ಲರ ತಪಾಸಣೆ ನಡೆದಿದೆ ಎಂದು ಡಿಎಚ್ಒ ಡಾ.ಜಬ್ಬಾರ್ ಹೇಳಿದರು.
ಜಿಲ್ಲೆಯಲ್ಲಿ 247 ಮಂದಿ ಹೊರರಾಜ್ಯದ ವಲಸೆ ಕಾರ್ಮಿಕರಿದ್ದು, ನಿತ್ಯ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಹರಿ ದೇಶಪಾಂಡೆ ಮಾಹಿತಿ ನೀಡಿದರು.
ಪ್ರಾದೇಶಿಕ ಆಯುಕ್ತ ಡಾ.ಎನ್.ವಿ. ಪ್ರಸಾದ್, ಜಿಲ್ಲಾಧಿಕಾರಿ ಶರತ್ ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿ ನ್ ಮಾರ್ಬನ್ಯಾಂಗ್, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಅಪರ ಡಿಸಿ ಡಾ.ಶಂಕ್ರಣ್ಣ ವಣಿಕ್ಯಾಳ, ಐಎಎಸ್ ಪ್ರೊಬೇಷನರಿ ಅಧಿಕಾರಿ ಗೋಪಾಲಕೃಷ್ಣ ಇದ್ದರು.

ವಿಡಿಯೋ, ಫೋಟೋ ತೆಗೆದವರನ್ನು ಬಂಧಿಸಿ
ಜಿಮ್ಸ್ ಆಸ್ಪತ್ರೆಯಲ್ಲಿರುವ ಸೋಂಕಿತರ ವಾಡರ್್, ಐಸೋಲೇಷನ್ ವಾಡರ್್, ಕ್ವಾರಾಂಟೈನ್ ಕೇಂದ್ರಗಳಿಗೆ ಹೊರಗಿನವರು ಹೋಗಿ ವಿಡಿಯೋ, ಫೋಟೋ ತೆಗೆಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಇಂಥವರನ್ನು ಪ್ರೈಮರಿ ಕಾಂಟ್ಯಾಕ್ಟ್ ಆಗಿ ಕ್ವಾರಂಟೈನ್ ಮಾಡಬೇಕು. ಜತೆಗೆ ರಾಷ್ಟ್ರೀಯ ವಿಕೋಪ ನಿರ್ವಹಣೆ (ಎನ್ಡಿಎಂ) ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಖಡಕ್ ಸೂಚನೆ ನೀಡಿದರು. ಈಗಾಗಲೇ ವ್ಯಕ್ತಿಯೊಬ್ಬರ ಮಾಹಿತಿ ಪಡೆದಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು. ಅಕ್ರಮವಾಗಿ ಪ್ರವೇಶಿಸಿದವರ ಬಗ್ಗೆ ಆಸ್ಪತ್ರೆ ನಿದರ್ೇಶಕರು ಮಾಹಿತಿ ನೀಡಿದ್ದಲ್ಲಿ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸತೀಶಕುಮಾರ್ ಹೇಳಿದರು.


ಕಲಬುರಗಿ ಜಿಮ್ಸ್ ಮತ್ತು ಇಎಸ್ಐಸಿ ಆಸ್ಪತ್ರೆ ಪ್ರವೇಶ ದ್ವಾರ ಬಳಿ ಸಿಸಿ ಕ್ಯಾಮರಾ ಅಳವಡಿಸಬೇಕು. ಆಸ್ಪತ್ರೆಯೊಳಗೆ ಬರುವವರ ಮತ್ತು ಹೋಗುವವರ ಮೊಬೈಲ್ ನಂಬರ್ ಸಹಿತ ಸಂಪೂರ್ಣ ಮಾಹಿತಿ ದಾಖಲಿಸಬೇಕು.
| ಕಪಿಲ್ ಮೋಹನ್
ಜಿಲ್ಲಾ ಉಸ್ತುವಾರಿ ಕಾರ್ಯದ
ರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net