

ಚಿತ್ರದುರ್ಗ: ಭಾರತ ದೇಶ, 1400 ವರ್ಷಗಳಿಂದಲೂ ಹೊರಗಿನವರ ದಾಳಿಗಳಿಗೆ ಒಳಗಾದರೂ ಜಗ್ಗದೆ ಇವತ್ತಿಗೂ ಜಗತ್ತಿಗೆ ಮಾರ್ಗದರ್ಶಕವಾಗಿ ಉಳಿದಿದೆ. ಇದಕ್ಕೆ ಹಿಂದು ಸಮಾಜದಲ್ಲಿರುವ ಆಗಾಧ ಮೌಲ್ಯಗಳೇ ಕಾರಣ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಸಂಪರ್ಕ ಪ್ರಮುಖ್ ಯಾದವಕೃಷ್ಣ ಹೇಳಿದರು.
ಆರ್‌ಎಸ್‌ಎಸ್ ಶತಮಾನೋತ್ಸವಕ್ಕೆ ಪದಾರ್ಪಣೆ ಮಾಡಿದ ಅಂಗವಾಗಿ ನಗರದ ಜೈನ್‌ಧಾಮದ ಬಳಿ ಭಾನುವಾರ ಸಂಜೆ ಏರ್ಪ ಡಿಸಿದ್ದ ಗಣವೇಷಧಾರಿ ಸ್ವಯಂಸೇವಕರ ಪಥ ಸಂಚಲನದ ವೇದಿಕೆ ಕಾರ‌್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
1925ರಲ್ಲಿ ಕಾನ್ಫುರದಲ್ಲಿ ಸಿಪಿಐ ಹಾಗೂ ನಾಗಪುರದಲ್ಲಿ ಡಾ.ಕೇಶವ್ ಬಲಿರಾಮ್ ಹೆಡಗೇವಾರ್ ನೇತೃತ್ವದಲ್ಲಿ ಆರ್‌ಎಸ್‌ಎಸ್ ಸ್ಥಾಪನೆಯಾಯಿತು. ಸಿಪಿಐಗೆ ಈ ನೆಲದ ವಾಸನೆ ಗ್ರಹಿಸುವ ಶಕ್ತಿ ಇರಲಿಲ್ಲ, ಟೀಕೆಗಳಿಗೆ ಕಿವಿಗೊಡದ ಕಾರಣಕ್ಕೆ ಸಂಘವಿಂದು ಭಾರತೀಯ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಿದೆ. ದೇಶದ ಪ್ರತಿ ಗ್ರಾಮಗಳಲ್ಲೂ ಶಾಖೆಗಳನ್ನು ಹೊಂದುವಂತಾಗಿದೆ ಎಂದರು.
ವ್ಯಕ್ತಿ ನಿರ್ಮಾಣ ಹಾಗೂ ಸಾಮರಸ್ಯ ಸಂಘದ ಧ್ಯೇಯವಾಗಿತ್ತು. ಸಂಘದ ಚಟುವಟಿಕೆಗಳನ್ನು ಸೈಕಲಾಜಿಕಲ್ ಲ್ಯಾಬೊರೇಟರಿ ಎಂದೇ ಬಣ್ಣಿಸಲಾಗಿದೆ. ನಮ್ಮ ದೇಶದ ಶಕ್ತಿಯೇ ವೈವಿಧ್ಯತೆ. ದೇವರು, ಆಚಾರ, ವಿಚಾರ, ಭಾಷೆ, ಜಾತಿಗಳು ಬೇರೆ ಬೇರೆಯಾಗಿದ್ದರೂ ನಮ್ಮಲ್ಲಿ ಸಾಮರಸ್ಯವಿದೆ.
ಮೌಲ್ಯಗಳಿಂದ ಕೂಡಿದ ನಮ್ಮ ಈ ಸಂಘಟನೆ ಕಾರಣದಿಂದಲೇ ಜಗತ್ತು ಇಂದು ಭಾರತದ ಕಡೆಗೆ ನೋಡುತ್ತಿದೆ. ಆದರೆ ಜಾತಿ, ಭಾಷೆ ಹೆಸರಲ್ಲಿ ನಮ್ಮಲ್ಲಿರುವ ಸಾಮರಸ್ಯ ಕದಡುವಂಥ ಪ್ರಯತ್ನಗಳಾಗುತ್ತಿವೆ. ಒಂದೇ ದೇವರು, ಒಂದೇ ಪುಸ್ತಕ ಎಂದು ಪ್ರತಿಪಾದಿಸುವ ಜ ನರಿರುವ ದೇಶಗಳಲ್ಲಿಂದು ಯುದ್ಧಗಳಾಗುತ್ತಿವೆ ಎಂದರು.
ಶಾಂತಿ, ನೆಮ್ಮದಿ ಮೂಲಕ ವಿಶ್ವಕ್ಕೆ ಮಂಗಳವಾಗಬೇಕು ಎಂದಾದರೆ ಪಂಚ ಪರಿವರ್ತನೆಗಳಿಗೆ ಮುಂದಾಗಬೇಕಿದೆ. ಕುಟುಂಬ, ಪರಿಸ ರ ಸಂರಕ್ಷಣೆ, ಸ್ವದೇಶಿ ಚಿಂತನೆ, ಸಾಮರಸ್ಯ ಹಾಗೂ ನಾಗರಿಕ ಶಿಷ್ಟಾಚಾರಗಳನ್ನು ಪಾಲಿಸಬೇಕಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ದೇ ಶಕ್ಕೆ ಕೊಟ್ಟಿರುವ ಸಂವಿಧಾನದ ಆಶಯಗಳು ಮಾರ್ಗದರ್ಶನದಂತೆ ನಾವೆಲ್ಲರೂ ಬದುಕಬೇಕಿದೆ ಎಂದರು. ಜಿಲ್ಲಾ ಸಂಘ ಚಾಲಕ ಜಿ.ಆ ರ್. ನಾಗೇಶ್, ನಗರ ಸಂಘ ಚಾಲಕ ಡಾ.ನಾಗರಾಜ್ ಇದ್ದರು.
ಸಂಘದ ಚಿತ್ರದುರ್ಗ ನಗರ ಮತ್ತು ಗ್ರಾಮಾಂತರ ಘಟಕದಿ ಂದ ವಿಜಯದಶಮಿ ನಡಿಗೆ ವಿಜಯದ ಕಡೆಗೆ ಎಂಬ ಘೋಷ ವಾಕ್ಯದೊಂದಿಗೆ ಜೈನಧಾಮದಿಂದ ಆರಂಭವಾದ ಪಥ ಸಂಚಲನ ಸಿ.ಕೆ.ಪುರ, ಚನ್ನಕೇಶವ ದೇವಾಲಯ, ಕೆಳಗೋಟೆ, ಕೆಎಸ್‌ಆರ್‌ಟಿಸಿ ಹಳೇ ಡಿಪೋ ರಸ್ತೆ ಮೊದಲಾದ ಮಾರ್ಗಗಳಲ್ಲಿ ಸಂಚರಿಸಿ ಮೂಲಸ್ಥಾನಕ್ಕೆ ಮರಳಿತು. ಎಂಎಲ್‌ಸಿ ಕೆ.ಎಸ್.ನವೀನ್ ಸೇರಿ ಬಿಜೆಪಿ ನಾನಾ ಪ್ರಮುಖರು ಗಣವೇಷಧಾರಿಗಳಾಗಿ ಭಾಗಿಯಾಗಿದ್ದರು.