ಹೊರ ಬಂದವರಿಗೆ ಬೈಕ್ ತಳ್ಳುವ ಶಿಕ್ಷೆ !

27 RON 2 NOOOO
Published on

ರೋಣ: ಪಟ್ಟಣದಲ್ಲಿ ಅನಗತ್ಯವಾಗಿ ಮನೆಯಿಂದ ಹೊರಗಡೆ ಬರುವ ಯುವಕರಿಗೆ ಪಿಎಸ್​ಐ ಪರಮೇಶ್ವರ ಕವಟಗಿ ಅವರು ತಮ್ಮ ಸಿಬ್ಬಂದಿಯ ಬೈಕ್ ತಳ್ಳುವ ಶಿಕ್ಷೆ ನೀಡುತ್ತಿದ್ದಾರೆ. ಕರೊನಾ ವೈರಸ್ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಏ. 14ರವರೆಗೆ ದೇಶಾದ್ಯಂತ ಲಾಕ್​ಡೌನ್ ಇದೆ. ಈ ಹಿನ್ನೆಲೆಯಲ್ಲಿ ಯಾರೊಬ್ಬರೂ ಮನೆಯಿಂದ ಹೊರ ಬರದಂತೆ ಸರ್ಕಾರ ವಿಧಿಸಿರುವ ನಿರ್ಬಂಧವನ್ನು ಪಾಲಿಸದೆ ರಸ್ತೆಗೆ ಇಳಿಯುತ್ತಿರುವ ಯುವಕರಿಗೆ ಪೊಲೀಸರು ಬೈಕ್ ತಳ್ಳುವ ಶಿಕ್ಷೆ ನೀಡುತ್ತಿದ್ದಾರೆ. ಅಲ್ಲದೆ, ಲಾಠಿ ರುಚಿ ತೊರಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net