ಹೊರ ಗುತ್ತಿಗೆ ನೌಕರರಿಗೆ ನೇರ ಪಾವತಿಗೆ ಆಗ್ರಹ

mb naganna
Published on

ಕೊಳ್ಳೇಗಾಲ: ನಗರ ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆ ನೌಕರರನ್ನು ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ಪಾವತಿಗೆ ತರುವ ಪ್ರಸ್ತಾಪವನ್ನು ರಾಜ್ಯ ಬಜೆಟ್‌ನಲ್ಲಿ ಘೋಷಿಸುವಂತೆ ಕರ್ನಾಟಕ ರಾಜ್ಯ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣ ಗೌಡ ಒತ್ತಾಯಿಸಿದರು.

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾವಿರಕ್ಕೂ ಹೆಚ್ಚು ಜನರು ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಕಾಲಕ್ಕೆ ಸಂಬಳ ಬಾರದೆ ಕನಿಷ್ಠ ವೇತನ ಸಿಗದೆ ತೊಂದರೆ ಪಡಬೇಕಾಗಿದೆ. ಆದ್ದರಿಂದ ಕರ್ತವ್ಯ ನಿರ್ವಹಿಸುವ ಈ ಕಾರ್ಮಿಕರನ್ನು ಗುತ್ತಿಗೆ ಪದ್ದತಿಯಿಂದ ನೇರಪಾವತಿಗೆ ತರಲು ಈ ಬಾರಿಯ ಬಜೆಟ್ ನಲ್ಲಿ ಜಾರಿ ಘೋಷಣೆ ಮಾಡುವಂತೆ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಆಗ್ರಹಿಸಿದರು.

ಕೊಳ್ಳೇಗಾಲ ನಗರಸಭೆಯ ಹೊರಗುತ್ತಿಗೆ ನೀರು ಸರಬರಾಜು ಸಹಾಯಕರಿಗೆ ಕಳೆದ ಮೂರು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಇದರಿಂದಾಗಿ ಹೊರ ಗುತ್ತಿಗೆ ನೌಕರರ ಕುಟುಂಬಗಳು ದೈನಂದಿನ ಬದುಕಿನ ನಿರ್ವಹಣೆಗೆ ಸಂಕಷ್ಟ ಎದುರಿಸುತ್ತಿದ್ದಾರೆ. ಕುಡಿಯುವ ನೀರು, ಸ್ವಚ್ಛತೆಯಲ್ಲಿ ತೊಡಗಿಕೊಂಡವರಿಗೆ ಆದ್ಯತೆ ಮೇಲೆ ವೇತನ ನೀಡಬೇಕು ಎಂದು ಅಗ್ರಹಿಸಿದರು. ಈ ವೇಳೆ ಕೊಳ್ಳೇಗಾಲ ನಗರಸಭೆ ಹೊರಗುತ್ತಿಗೆ ನೀರು ಸರಬರಾಜು ಸಹಾಯಕ ಸಂಘದ ಪುಟ್ಟಮಾದು, ಸೋಮಣ್ಣ, ಸುರೇಶ್, ನಿಂಗರಾಜು, ಚಿಕ್ಕಣ್ಣ ಸ್ವಾಮಿ, ಕುಮಾರ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net