ಬಳ್ಳಾರಿ : ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಿರ್ವಹಣಾಶಾಸ್ತ ಅಧ್ಯಯನ ವಿಭಾಗದಲ್ಲಿ ಪೂರ್ಣಕಾಲಿಕ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದ ಹೊನ್ನೂರಸ್ವಾಮಿ. ವೈ, ಅವರಿಗೆ ಪಿಎಚ್‌ಡಿ ಪದವಿ ಲಭಿಸಿದೆ.
ವಿವಿಯ ವ್ಯವಹಾರ ಅಧ್ಯಯನ ನಿಕಾಯದ ನಿರ್ವಹಣಾಶಾಸ್ತ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಕೆ. ಸಿ. ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ‘ ಅಪರೇಷನಲ್ ಪರ್ಫಾರ್ಮನ್ಸ್ ಆಫ್ ಆನ್‌ಲೈನ್ ಎಜುಕೇಶನ್ ಅಪ್ಸ್ - ಎ ಸ್ಟಡಿ ಆಫ್ ಸೆಲೆಕ್ಟ್ ಅಪ್ಸ್ ಆಕ್ಟಿಂಗ್ ಇನ್ ಕಲ್ಯಾಣ ಕರ್ನಾಟಕ ರೀಜನ್’ ಎಂಬ ಪ್ರಬಂಧ ಪ್ರಸ್ತುತ ಪಡಿಸಿದ್ದಕ್ಕಾಗಿ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಗಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.