ಹೊನವಳ್ಳಿ ಸಂಪರ್ಕ ರಸ್ತೆ ಅಭಿವೃದ್ಧಿ

4spt1
Published on

ಸೋಮವಾರಪೇಟೆ: ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ದೊಡ್ಡಮಳ್ತೆ ಶ್ರೀ ಹೊನ್ನಮ್ಮ ತಾಯಿ ಹಾಗೂ ಸಿದ್ದೇಶ್ವರ ಸ್ವಾಮಿಗೆ ಶನಿವಾರ ಪೂಜೆ ಸಲ್ಲಿಸಿದರು.


ನಂತರ ಗ್ರಾಮಸ್ಥರು ಶಾಸಕರನ್ನು ಮೆರವಣಿಗೆಯಲ್ಲಿ ಕರೆತಂದು ಸನ್ಮಾನಿಸಿದರು. ಹೊನ್ನಮ್ಮನ ಕೆರೆಯಿಂದ ಹೊನವಳ್ಳಿ ಗ್ರಾಮ ಸಂಪರ್ಕ ರಸ್ತೆಗೆ ಅನುದಾನ ಕಲ್ಪಿಸುವಂತೆ ಗ್ರಾಮಸ್ಥರು ಶಾಸಕರಲ್ಲಿ ಮನವಿ ಮಾಡಿದರು. ಕಾಮಗಾರಿಗೆ ಅನುದಾನ ಕಲ್ಪಿಸುವುದಾಗಿ ಶಾಸಕರು ಭರವಸೆ ನೀಡಿದರು.


ದೊಡ್ಡಮಳ್ತೆ ಗ್ರಾಪಂ ಅಧ್ಯಕ್ಷರಾದ ಬಿಂದು, ಸದಸ್ಯ ಗೋಪಾಲಕೃಷ್ಣ, ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ವೀರೇಶ್, ಪ್ರಮುಖರಾದ ಎಸ್.ಎನ್.ಹೂವಯ್ಯ, ಎಚ್.ಆರ್. ಸುರೇಶ್ ಎಸ್.ಡಿ.ದಿವಾಕರ್, ಕೃಷ್ಣಪ್ಪ, ಎಂ.ಬಿ.ವಸಂತ್ ಕುಮಾರ್, ಡಿ.ಎಸ್.ಪೂವಯ್ಯ, ಸಂಜಯ್ ಜೀವಿಜಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net