

ಶಹಾಬಾದ್: ಹೊನಗುಂಟಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಹಿಬೂಬ್ ಪಟೇಲ್, ಉಪಾಧ್ಯಕ್ಷರಾಗಿ ಇಂದುಬಾಯಿ ದೇಸಾಯಿ ಆಯ್ಕೆಯಾದರು.
ಒಟ್ಟು 17 ಸದಸ್ಯರಿದ್ದು, ಅಧ್ಯಕ್ಷ ಸ್ಥಾನಕ್ಕೆ ಮಹಿಬೂಬ್, ಶಿವಪ್ಪ ಬಾಬಣ್ಣ ನಾಮಪತ್ರ ಸಲ್ಲಿಸಿದ್ದರು. ಮಹಿಬೂಬ್ 11 ವೋಟ್ ಪಡೆದು ಗೆಲುವು ಸಾಧಿಸಿದರೆ, ಶಿವಪ್ಪ 6 ಮತ ಪಡೆದು ಸೋಲನುಭವಿಸಿದರು. ಉಪಾಧ್ಯಕ್ಷರಾಗಿ ಇಂದುಬಾಯಿ ದೇಸಾಯಿ ಅವಿರೋಧ ಆಯ್ಕೆಯಾದರು. ಕಾಂಗ್ರೆಸ್ ಬೆಂಬಲಿತರು ಎರಡು ಹುದ್ದೆಗೆ ಆಯ್ಕೆಯಾಗಿದ್ದರಿಂದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ್, ಮುಖಂಡರಾದ ಮಲ್ಲಿಕಾರ್ಜುನ ಪೂಜಾರಿ, ಅಜೀಜ್ ಸೇಠ್, ಅಜಿತ್‌ಕುಮಾರ ಪಾಟೀಲ್, ಭೀಮಾಶಂಕರ ಖೇಣಿ, ಮರೆಪ್ಪ ಹಳ್ಳಿ, ಪೀರ್‌ಪಾಶಾ, ರುದ್ರಗೌಡ ಪಾಟೀಲ್, ರಾಜು ಆಡಿನ್, ರಾಜು ಮರಗೋಳ, ದೇವೆಂದ್ರ ಕಾರೊಳ್ಳಿ, ರಾಯಪ್ಪ ಇತರರಿದ್ದರು.