ಹೊದ್ದೂರಿನಲ್ಲಿ ಗಾಳಿ ಮಳೆ ಅವಾಂತರ

9..npk -4
ನಾಪೋಕ್ಲು - ಹೊದ್ದೂರು ಗ್ರಾಮದಲ್ಲಿ ಮಂಗಳವಾರ ಬಿದ್ದ ಗಾಳಿ ಮಳೆಗೆ ರಸ್ತೆ ಮೇಲೆ ಮುರಿದು ಬಿದ್ದ ಮರ.
Published on

ನಾಪೋಕ್ಲು : ಸಮೀಪದ ಹೊದ್ದೂರು ಗ್ರಾಮದಲ್ಲಿ ಸೋಮವಾರ ರಾತ್ರಿ ಸುರಿದ ಗಾಳಿ ಸಹಿತ ಮಳೆಯಿಂದ ಮರವೊಂದು ಮುರಿದು ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳು ಕತ್ತಲಲ್ಲಿ ಮುಳುಗಿವೆ.
ಬೃಹತ್ ಗಾತ್ರದ ಅರಳಿ ಮರ ಹೊದ್ದೂರು-ನಾಪೋಕ್ಲು ಸಂಪರ್ಕ ರಸ್ತೆಯಲ್ಲಿ ಮುರಿದು ಬಿದ್ದಿದ್ದು ಆರು ವಿದ್ಯುತ್ ಕಂಬಗಳು ತುಂಡಾಗಿವೆ. ಮಂಗಳವಾರ ಸೆಸ್ಕ್ ಸಿಬ್ಬಂದಿ ದುರಸ್ತಿ ಕಾರ್ಯ ನಡೆಸಿದರು. ಮರ ಮುರಿದು ರಸ್ತೆ ಸಂಪರ್ಕ ಕಡಿತಗೊಂಡು ವಾಹನ ಸಂಚಾರಕ್ಕೂ ಅಡ್ಡಿಯಾಗಿತ್ತು. ಖಾಸಗಿ ಬಸ್‌ಗಳು ಸೇರಿದಂತೆ ವಾಹನಗಳು ಪರ್ಯಾಯ ಮಾರ್ಗದಲ್ಲಿ ತೆರಳುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಸೆಸ್ಕ್ ಸಿಬ್ಬಂದಿ ವಿದ್ಯುತ್ ಪೂರೈಕೆ ಮಾಡಲು ಅವಿರತ ಶ್ರಮಿಸಿದರು. ಆದರೆ ಸಂಜೆಯವರೆಗೂ ವಿದ್ಯುತ್ ಪೂರೈಕೆ ಆಗಿರಲಿಲ್ಲ. ವಿದ್ಯುತ್ ಪೂರೈಕೆ ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ನಾಪೋಕ್ಲು ಸೆಸ್ಕ್ ಇಂಜಿನಿಯರ್ ಹರೀಶ್ ತಿಳಿಸಿದರು.
ಮಳೆ ಹಿನ್ನೆಲೆಯಲ್ಲಿ ಮತಗಟ್ಟೆ ಪೂರ್ವಸಿದ್ಧತೆಗೆ ಬಂದ ಸಿಬ್ಬಂದಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸೆಸ್ಕ್ ಸಿಬ್ಬಂದಿ ಶ್ರಮದ ಫಲವಾಗಿ ರಾತ್ರಿ 8 ಗಂಟೆ ವೇಳೆಗೆ ವಿದ್ಯುತ್ ಸಮಸ್ಯೆ ಪರಿಹಾರವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net