ಹೊತ್ತಿಹುರಿದ ಗ್ಯಾಸ್​ ಸಿಲಿಂಡರ್​

Published on

ಪಾವಗಡ: ತಾಲೂಕಿನ ದೊಮ್ಮತಮರಿ ಗ್ರಾಮದ ಮನೆಯೊಂದರಲ್ಲಿ ಅಡುಗೆ ಮಾಡುವ ವೇಳೆ ಗ್ಯಾಸ್​ ಸಿಲಿಂಡರ್​ ಹೊತ್ತಿಹುರಿದು ದವಸ ದಾನ್ಯ ಸುಟ್ಟು ಭಸ್ಮವಾಗಿವೆ. ಸೋಮವಾರ ರಾತ್ರಿ 7 ಗಂಟೆ ಸಮಯದಲ್ಲಿ ಇಸ್ಮಾಯಿಲ್​ ಸಾಬ್​ ಎಂಬವವರ ಮನೆಯಲ್ಲಿ ಅಡುಗೆ ಮಾಡುವ ವೇಳೆ ಸಿಲಿಂಡರ್​ ಹೊತ್ತಿಹುರಿದಿದೆ. ಕುಟುಂಬಸ್ಥರು ತಣ ಮನೆಯಿಂದ ಆಚೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಕ್ಕಪಕ್ಕದ ಸಾರ್ವಜನಿಕರ ಸಹಾಯದಿಂದ ಬೆಂಕಿ ಆರಿಸಿದ್ದಾರೆ. ಮನೆಯಲ್ಲಿದ್ದ 10 ಮೂಟೆ ಅಕ್ಕಿ, 5 ಮೂಟೆ ರಾಗಿ ಹಾಗೂ ಕಿಟಕಿ ಬಾಗಿಲು ಸುಟ್ಟು ಭಸ್ಮವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net