ಹೊತ್ತಿ ಉರಿದ ಕಾರು, ಚಾಲಕ ಪಾರು

28ark4
ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ರಸ್ತೆಯಲ್ಲಿ ಶಾರ್ಟ್ ಸರ್ಕೀಟ್‌ನಿಂದ ಕಾರು ಬೆಂಕಿ ಅವಘಡಕ್ಕೆ ತುತ್ತಾಗಿ ಹೊತ್ತಿ ಉರಿದು ಧಗದಹಿಸಿತು.
Published on

ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಶಾರ್ಟ್ ಸರ್ಕೀಟ್ ಸಂಭವಿಸಿ ಹೊತ್ತಿ ಉರಿದಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ತಾಲೂಕಿನ ಹೆತ್ತಗೌಡನಹಳ್ಳಿ ಜಯಕುಮಾರ್ ಎಂಬುವರು ಶನಿವಾರ ಕೊಡಗಿನ ಬಾಲತ್ರಿಪುರ ಸುಂದರಿ ದೇವಸ್ಥಾನಕ್ಕೆ ಪೂಜೆಗೆ ತೆರಳಿ ಮರಳುವಾಗ ಮದಘಟ್ಟ ಬಳಿ ಕಾರಿನ ಬ್ಯಾಟರಿಯಲ್ಲಿ ಹೊಗೆ ಕಾಣಿಸಿಕೊಂಡಿದೆ. ಚಾಲಕ ನೀರು ತರಲು ಕಾರಿನಿಂದ ಕೆಳಗಿಳಿದ ನಂತರ ಬೆಂಕಿ ಹೊತ್ತಿಕೊಂಡು ಧಗದಹಿಸಿದೆ. ಅರಕಲಗೂಡು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳುವಷ್ಟರಲ್ಲಿ ಕಾರು ಬೆಂಕಿ ಅವಘಡಕ್ಕೆ ತುತ್ತಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net