ಹೊಟ್ಯಾಪುರ ಶ್ರೀಗಳ ಪುಣ್ಯಾರಾಧನೆ ನಾಳೆ

111
Published on

ಸಾಸ್ವೆಹಳ್ಳಿ: ಉಜ್ಜಯಿನಿ ಶಾಖಾ ಮಠಗಳಲ್ಲಿ ಒಂದಾದ ಹೊಟ್ಯಾಪುರ ಹಿರೇಮಠದ ಲಿಂ. ಗಿರಿಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ ಆ.15ರ ಮಂಗಳವಾರ ಮಠದ ಆವರಣದಲ್ಲಿ ನಡೆಯಲಿದೆ.
ಬಾಳೆಹೊನ್ನೂರು ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಭಗವತ್ಪಾದರು, ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ನಾಡಿನ ಅನೇಕ ಮಠಾಧೀಶ್ವರರ ಉಪಸ್ಥಿತಿಯಲ್ಲಿ ಅಂದು ಬೆಳಗ್ಗೆ ಲಿಂ. ಶ್ರೀಗಳ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ನಡೆಯಲಿದೆ. ನಂತರ 10.30ಕ್ಕೆ ಮಠದ ಆವರಣದಲ್ಲಿ ಧರ್ಮ ಸಭೆ ಜರುಗಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net