

ಮೈಸೂರು: ಹೊಟ್ಟೆ ನೋವು ತಾಳಲಾರದೆ ಕ್ಯಾತಮಾರನಹಳ್ಳಿದ ನಿವಾಸಿ ಸುನಿಲ್(24) ನೇಣಿಗೆ ಶರಣಾಗಿದ್ದಾರೆ.
ಇವರು 3 ವರ್ಷಗಳ ಹಿಂದೆ ಕ್ಯಾತಮಾರನಹಳ್ಳಿಯ ಕಾವ್ಯಾ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಒಂದು ವರ್ಷದ ಮಗು ಇತ್ತು.
ಆದರೆ ಸುನಿಲ್ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆದಿದ್ದರೂ ಹೊಟ್ಟೆ ನೋವು ವಾಸಿಯಾಗಿರಲಿಲ್ಲ ಇದರಿಂದ ಬೇಸತ್ತಿದ್ದ ಇವರು, ಹಲವು ದಿನಗಳಿಂದ ಆಹಾರ ತ್ಯಜಿಸಿದ್ದರು.
ಗುರುವಾರ ಹೆಂಡತಿ ಮತ್ತು ಮಗುವನ್ನು ತವರುಮನೆಗೆ ಕಳುಹಿಸಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.