ಹೊಗೆಸೊಪ್ಪು ಬೇಲ್‌ಗಳ ಹರಾಜು ಪ್ರಕ್ರಿಯೆ

ಹೊಗೆಸೊಪ್ಪು ಬೇಲ್‌ಗಳ ಹರಾಜು ಪ್ರಕ್ರಿಯೆ
Published on


ಅರಕಲಗೂಡು: ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಸೋಮವಾರ ನಡೆದ ಹರಾಜಿನಲ್ಲಿ ಗುಣಮಟ್ಟದ ಒಂದು ಕೆಜಿ ಹೊಗೆಸೊಪ್ಪು 240 ರೂಪಾಯಿಗೆ ಮಾರಾಟವಾಯಿತು.


ಅತಿಯಾದ ಮಳೆಗೆ ಈ ಬಾರಿ ತಂಬಾಕು ಇಳುವರಿ ಕುಂಡಿತಗೊಂಡಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ತಂಬಾಕಿಗೆ ಬೇಡಿಕೆ ಬಂದಿದ್ದು ವರ್ತಕರು ಹೊಗೆಸೊಪ್ಪು ಖರೀದಿಸಲು ಹೆಚ್ಚಿನ ಆಸಕ್ತಿ ತೋರಿದ್ದಾರೆ.


ಮಾರುಕಟ್ಟೆಯ ಪ್ಲಾಟ್ ಫಾರಂ 63ರಲ್ಲಿ ನಡೆದ ಹರಾಜಿನಲ್ಲಿ 747 ಬೇಲ್ ಗಳು ಅವಕವಾಗಿದ್ದವು. ಗರಿ?್ಠ ಬೆಲೆ ಒಂದು ಕೆಜಿಗೆ 240 ರೂ ಹಾಗೂ ಕಡಿಮೆ ಬೆಲೆ 150 ರೂಪಾಯಿಗೆ ಕೊಳ್ಳಲಾಯಿತು. ರೈತರಿಗೆ ಸರಾಸರಿ 219 ರೂ ದರ ದೊರಕಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net