ಹೊಗೆಸೊಪ್ಪು ಬೆಲೆ ಕುಸಿತ ; ದಿಢೀರ್ ಪ್ರತಿಭಟನೆ

Published on


ಅರಕಲಗೂಡು: ಹೊಗೆಸೊಪ್ಪು ಬೆಲೆ ಕುಸಿತ ಕಂಡ ಹಿನ್ನಲೆಯಲ್ಲಿ ಆಕ್ರೋಶಗೊಂಡು ಬೆಳೆಗಾರರು ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆ ಬಂದ್ ಮಾಡಿ ಬುಧವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಮಾರುಕಟ್ಟೆಯಲ್ಲಿ ಮಂಗಳವಾರ ಗುಣಮಟ್ಟದ ಒಂದು ಕೆಜಿ ಹೊಗೆಸೊಪ್ಪು 160 ರೂಪಾಯಿಗೆ ಮಾರಾಟವಾಗಿತ್ತು. ಬುಧವಾರ ಏಕಾಏಕಿ 120 ರೂ ಹರಾಜು ಪ್ರಕ್ರಿಯೆ ಆರಂಭಿಸಲಾಯಿತು. 180ರಿಂದ 200 ರೂಪಾಯಿಗೆ ಮಾರಾಟ ಮಾಡಬೇಕಿದ್ದ ಬೇಲ್‌ಗಳಿಗೆ ಕೇವಲ 150 ರೂಪಾಯಿಗೆ ವರ್ತಕರು ಬಿಡ್ ಮಾಡಲು ಮುಂದಾದರು. ಬೆಲೆ ಕುಸಿತದಿಂದ ಕುಪಿತರಾದ ರೈತರು ಎರಡು ಮಾರುಕಟ್ಟೆಗಳಲ್ಲಿ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಧಿಢೀರ್ ಪ್ರತಿಭಟನೆ ನಡೆಸಿದರು.

ಅತಿವೃಷ್ಟಿ ಪರಿಣಾಮ ತಂಬಾಕು ಇಳುವರಿ ಕುಂಠಿತಗೊಂಡಿದೆ. ಅಧಿಕ ಹಣ ವ್ಯಯಿಸಿ ಹೊಗೆಸೊಪ್ಪು ಉತ್ಪಾದಿಸಲಾಗಿದೆ. ಮಾರುಕಟ್ಟೆಯಲ್ಲಿ ವರ್ತಕರು ಬೇಕಾಬಿಟ್ಟಿ ದರಕ್ಕೆ ಬಿಡ್ ಮಾಡುತ್ತಿದ್ದು ರೈತರಿಗೆ ಉತ್ತಮ ಬೆಲೆ ನೀಡದೆ ವಂಚಿಸುತ್ತಿದ್ದಾರೆ ಎಂದು ರೈತರು ಘೋಷಣೆ ಕೂಗಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net