

ಅಳವಂಡಿ: ವೆಚ್ಚಗಳಿಗೆ ಕಡಿವಾಣ ಹಾಕುವ ಸಾಮೂಹಿಕ ವಿವಾಹಗಳಿಗೆ ಆದ್ಯತೆ ಸಿಗಲಿ ಎಂದು ಶಿರಹಟ್ಟಿಯ ಫಕೀರಸಿದ್ಧರಾಮ ಸ್ವಾಮೀಜಿ ಹೇಳಿದರು.
ಸಮೀಪದ ಹಂದ್ರಾಳ ಗ್ರಾಮದಲ್ಲಿ ಫಕೀರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ದಂಪತಿಗಳು ಸಂಸಾರ ನಂಬಿಕೆ ಹೊಂದಾಣಿಕೆಯಿಂದ ಜೀವಿಸಿದಾಗ ಬದುಕು ಸರಾಗವಾಗಿ ನಡೆಯಲಿದೆ. ಮದುವೆ ಇತರ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಜನರಲ್ಲಿ ಒಗ್ಗಟ್ಟಿನ ಭಾವನೆ ಮೂಡಲಿದೆ ಎಂದರು.
ಗ್ರಾಮದ ಮಾರುತಿ ಪಾದಗಟ್ಟೆಯಿಂದ ಶಿರಹಟ್ಟಿ ಫಕೀರಸಿದ್ಧರಾಮ ಸ್ವಾಮಿಗಳ ಅಡ್ಡಪಲ್ಲಕ್ಕಿ ಪೂರ್ಣಕುಂಭ, ಕಳಸ, ಡೊಳ್ಳು, ಭಜಂತ್ರಿಮೇಳ ಹಾಗೂ ಭಜನಾಯೊಂದಿಗೆ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ಮೈನಳ್ಳಿ-ಬಿಕನಳ್ಳಿಯ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಪ್ರಮುಖರಾದ ಶಿವಣ್ಣ ಶಹಾಪುರ, ಮಂಜುನಾಥ ಪೊಲೀಸ ಪಾಟೀಲ, ಬಸವರಾಜ ಮಂಡಪ್ಪನವರ, ಯೋಗೇಶ ಬಡಿಗೇರ, ಶರಣಪ್ಪ ವಾಲ್ಮೀಕಿ, ನಿಂಗನಗೌಡ, ದ್ಯಾಮಣ್ಣ, ಚಿನ್ನಪ್ಪ, ಅಶೋಕ, ವೀರಣ್ಣ, ಅಮರಪ್ಪ, ಸೋಮಶೇಖರ, ಪಕೀರೇಶ, ಮಲ್ಲಪ್ಪ, ಶೇಖರಗೌಡ, ಗುಡದಪ್ಪ, ಬೀರಪ್ಪ, ಅಜ್ಜಯ್ಯ, ನಾಗರಾಜ, ಮುತ್ತಣ್ಣ, ಫಕೀರೇಶ, ನೀಲಪ್ಪ ಇತರರಿದ್ದರು.