ಹೊಂದಾಣಿಕೆ, ಓಲೈಕೆ ರಾಜಕಾರಣಿ ನಾನಲ್ಲ

A NARAYANASWAMY ctd
Published on

ಚಿತ್ರದುರ್ಗ: ಬಿಜೆಪಿಯನ್ನು ತಳಹದಿಯಿಂದ ಕಟ್ಟಿ ಬೆಳೆಸುವಲ್ಲಿ ನನ್ನ ಬೆವರ ಹನಿಯೂ ಇದೆ. ನಾನೆಂದೂ ಹೊಂದಾಣಿಕೆ, ಓಲೈಕೆ, ಪಕ್ಷಾಂತರ ರಾಜಕಾರಣಿಯಲ್ಲ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಟಿಕೆಟ್ ಸಿಗದ ಬಿಜೆಪಿ ಹಾಲಿ ಸಂಸದರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಈ ರೀತಿ ತಿರುಗೇಟು ನೀಡಿದರು.

ಮೊದಲ ಪಟ್ಟಿಯಲ್ಲಿ 195ಕ್ಕೂ ಹೆಚ್ಚು ಮಂದಿಗೆ ಕಮಲ ಟಿಕೆಟ್ ಘೋಷಣೆಯಾಗಿದೆ. 24ರಿಂದ 48 ಗಂಟೆಯೊಳಗೆ ದೇಶದ ಇನ್ನುಳಿದ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಯನ್ನು ಬಿಜೆಪಿಯ ಲೋಕಸಭಾ ಮಂಡಳಿ ಬಿಡುಗಡೆಗೊಳಿಸಲಿದೆ. ಅದಕ್ಕಾಗಿಯೇ ಪಕ್ಷದ ಎಲ್ಲರೂ ಕಾಯುತ್ತಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net