ಹೊಂಗಳ್ಳಿ ಕೆರೆ ಅಭಿವೃದ್ಧಿಗೆ ಕ್ರಮ

Published on

ಗುಂಡ್ಲುಪೇಟೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಹೊಂಗಳ್ಳಿ ಗ್ರಾಮದ ಕೆರೆಯಂಗಳದಲ್ಲಿ ಸಸಿಗಳನ್ನು ನೆಡಲಾಯಿತು.

ಗ್ರಾಮಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಚಂದ್ರಶೇಖರ್ ಮಾತನಾಡಿ, ಗ್ರಾಮದ ಕೆರೆಯನ್ನು ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಪುನಶ್ಚೇತನಗೊಳಿಸಲಾಗಿದೆ. ಇದು 709ನೇ ಕೆರೆಯಾಗಿದ್ದು, ಇದರ ಅಂಗಳದಲ್ಲಿ ಗಿಡ ನೆಡುವ ಮೂಲಕ ಕೆರೆ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ. ಇದರಿಂದ ಮಣ್ಣಿನ ಸವಕಳಿ ತಪ್ಪಿಸುವ ಜತೆಗೆ ಪ್ರಾಣಿ ಪಕ್ಷಿಗಳಿಗೆ ಆಶ್ರಯ, ಗ್ರಾಮಕ್ಕೆ ಪರಿಶುದ್ಧ ಗಾಳಿ, ಹಣ್ಣು ಹಂಪಲು ದೊರಕುತ್ತದೆ ಎಂದು ತಿಳಿಸಿದರು. ಕೆರೆ ಇಂಜಿನಿಯರ್ ಪುಷ್ಪರಾಜ್, ಗ್ರಾಮದ ಮುಖಂಡ ಚೇರ್ಮನ್ ಲೋಕಪ್ಪ, ಕೆರೆ ಅಭಿವೃದ್ಧಿ ಸಮಿತಿ ಸದಸ್ಯ ಅಶೋಕ್, ವಲಯದ ಮೇಲ್ವಿಚಾರಕ ಉಮೇಶ್, ಕೃಷಿ ಮೇಲ್ವಿಚಾರಕ ಟಿ.ಜಿ.ಸುಬ್ರಹ್ಮಣ್ಯ, ಸೇವಾಪ್ರತಿನಿಧಿ ಶಾರದಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net