ಹೈವೋಲ್ಟೇಜ್ ಮೀಟಿಂಗ್ ನಡೆದಿದೆ

c.t.ravi
Published on

ಚಿತ್ರದುರ್ಗ: ಹೈವೋಲ್ಟೇಜ್ ಮೀಟಿಂಗ್ ನಡೆದಿರುವ ಕುರಿತಂತೆ ಕಾಂಗ್ರೆಸ್ಸಿನ ವಲಯದಿಂದಲೇ ತಮಗೆ ಮಾಹಿತಿ ಇದೆ. ಆದರೆ, ಈಗ ಈ ಕುರಿತಂತೆ ಏನೂ ಹೇಳುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ಹೈಕಮಾಂಡ್ ನಯಾ ಪೈಸೆ ಕೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಆ ಪಕ್ಷದಿಂದಲೇ ಒಂದು ಮಹತ್ವದ ಸಭೆ ನಡೆದಿರುವುದು ಗೊತ್ತಾಗಿದೆ. ಐಟಿ ದಾಳಿಯಲ್ಲಿ ಬೆಂಗಳೂರಲ್ಲಿ ಸಿಕ್ಕಿರುವ ಹಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಬಿಐಗೆ ಒಪ್ಪಿಸಲಿ ಎಂದು ಸವಾಲು ಹಾಕಿದರು.
ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆಂದೇ ಹಣ ಸಂಗ್ರಹಿಸಲಾಗಿದೆ ಎಂದು ದೂರಿದ ಅವರು, ಚಿತ್ರದುರ್ಗವನ್ನು ನೋಡಿದರೆ ಸಾಕು ರಾಜ್ಯದ ಕಥೆ ತಿಳಿಯುತ್ತದೆ. ಈಗ ಕಾಣಿಸಿರುವ ವಿದ್ಯುತ್ ಕೊರತೆ ಮುಂದಿನ ದಿನಗಳಲ್ಲಿ ಯಾವ ಮಟ್ಟಕ್ಕೆ ತಲುಪುವುದೋ ಗೊತ್ತಿಲ್ಲ. ಧರ್ಮದ ಆಧಾರದ ಮೇಲೆ ಭಯೋತ್ಪಾದನೆ ನಡೆಯುತ್ತಿದೆ ಎಂದ ಸಚಿವ ಈಶ್ವರಖಂಡ್ರೆ ಸತ್ಯ ಹೇಳಿದ್ದಾರೆ ಎಂದರು.
ಕಲಾವಿದರ ಬಳಿ ಹಣ ಕೇಳಿರುವ ಘಟನೆ ಸಿದ್ದರಾಮಯ್ಯರ ತವರಲ್ಲಿ ನಡೆದಿದೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net