ಹೈನುಗಾರಿಕೆಯಿಂದ ರೈತರ ಆರ್ಥಿಕ ಪರಿಸ್ಥಿತಿ ಚೇತರಿಕೆ

25-pnp 1
ಪಾಂಡವಪುರ ತಾಲೂಕಿನ ಬೇವಿನಕುಪ್ಪೆ ಗ್ರಾಮದ ಡೇರಿ ಮೊದಲ ಅಂತಸ್ತಿನ ಕಟ್ಟಡ ಕಾಮಗಾರಿಗೆ ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಭೂಮಿಪೂಜೆ ನೆರವೇರಿಸಿದರು. ಆರ್.ಪ್ರಸಾದ್, ಎಚ್.ಎಲ್.ಉಷಾ, ಲಿಖಿತ್ ಇದ್ದರು.
Published on

ಪಾಂಡವಪುರ: ಹೈನುಗಾರಿಕೆಯಿಂದ ರೈತರ ಆರ್ಥಿಕ ಪರಿಸ್ಥಿತಿ ಚೇತರಿಕೆ ಕಂಡು ಜೀವನ ಮಟ್ಟ ಸುಧಾರಣೆ ಕಾಣುತ್ತಿದೆ ಎಂದು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಅಭಿಪ್ರಾಯಪಟ್ಟರು.

ತಾಲೂಕಿನ ಬೇವಿನಕುಪ್ಪೆ ಗ್ರಾಮದ ಡೇರಿ ಮೊದಲ ಅಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಒಕ್ಕೂಟದಿಂದ ಸವಲತ್ತುಗಳನ್ನು ಪಡೆಯಲು ಮತ್ತು ಸರ್ಕಾರದಿಂದ ಸಿಗುವ ಪ್ರೋತ್ಸಾಹ ಹಣ ವಾಪಸ್ ಆಗದಂತೆ ತಡೆಯಲು ರೈತರು ಡೇರಿಗಳಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು. ಗುಣಮಟ್ಟದ ಹಾಲಿನ ವಿಚಾರದಲ್ಲಿ ಈ ಹಿಂದೆ ಪಾಂಡವಪುರ ತಾಲೂಕು ಕೊನೆಯ ಸ್ಥಾನದಲ್ಲಿತ್ತು. ಪ್ರಸ್ತುತ ಎರಡನೇ ಸ್ಥಾನದಲ್ಲಿದೆ. ಮಾಸಿಕ 40 ಲಕ್ಷ ರೂ.ಪ್ರೋತ್ಸಾಹ ಧನ ಸರ್ಕಾರಕ್ಕೆ ವಾಪಸ್ ಆಗುತ್ತಿತ್ತು. ಈಗ ಕೇವಲ 5 ಲಕ್ಷಕ್ಕೆ ಬಂದಿದೆ. ಒಂದು ಪೈಸೆ ವಾಪಸ್ ಆಗದಂತೆ ರೈತರು ಗುಣಮಟ್ಟದ ಹಾಲು ಪೂರೈಸಬೇಕು. ಜತೆಗೆ ಕೊಬ್ಬಿನಾಂಶದ ಮೇಲೆ ದರ ನಿಗದಿ ಮಾಡಬೇಕು ಎಂದು ಸಲಹೆ ನೀಡಿದರು.

ಹಾಲು ಉತ್ಪಾದಕರ ಸಹಕಾರ ಸಂಘದ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಒಕ್ಕೂಟ ಒಂದು ಲಕ್ಷ ರೂ.ಸಹಾಯ ಮಾಡುತ್ತಿದೆ. ಈ ಅನುದಾಣವನ್ನು ದುಪ್ಪಟ್ಟುಗೊಳಿಸುವಂತೆ ಒಕ್ಕೂಟದ ಸಭೆಯಲ್ಲಿ ಒತ್ತಾಯಿಸಲಾಗುವುದು. ಜತೆಗೆ ಅಪೆಕ್ಸ್ ಬ್ಯಾಂಕ್‌ನಿಂದಲೂ 1 ಲಕ್ಷ ರೂ. ನೀಡುವಂತೆ ಮನವಿ ಮಾಡಲಾಗುವುದು. ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಮತ್ತು ಕಾರ್ಯದರ್ಶಿ ಒಗ್ಗೂಡಿ ಕೆಲಸ ಮಾಡಿದರೆ ಡೇರಿ ಬೆಳವಣಿಗೆ ಸಾಧ್ಯ ಎಂದರು.

ಮನ್‌ಮುಲ್ ಉಪ ವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗ ವಿಸ್ತರಣಾಧಿಕಾರಿ ಎಚ್.ಎಲ್.ಉಷಾ, ಡೇರಿ ಅಧ್ಯಕ್ಷ ಲಿಖಿತ್, ನಿರ್ದೇಶಕರಾದ ಯೋಗೇಶ್, ನಿಂಗೇಗೌಡ, ಬಾಳೇಗೌಡ, ನರಸಿಂಹೇಗೌಡ, ಚೆನ್ನವೀರಚಾರಿ, ಆನಂದ್‌ಕುಮಾರ್, ಬಿ.ಸಿ.ಪುಷ್ಪಾ, ಎಲ್‌ಐಸಿ ಸುರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net