ಹೈನುಗಾರಿಕೆಯಿಂದ ಆರ್ಥಿಕ ಸಬಲ

24 hbd 04
Published on

ಚಿಟಗುಪ್ಪ: ರೈತರು ಕೃಷಿ ಜತೆಗೆ ಹೈನುಗಾರಿಕೆ ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ರಿಲಾಯನ್ಸ್ ಫೌಂಡೇಷನ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಮಚಂದ್ರ ಶೇರಿಕಾರ್ ಹೇಳಿದರು.
ಬೇಮಳಖೇಡದ ರೈತ ನಾರಾಯಣರಾವ ಸುಣಗಾರ ಅವರ ಡೈರಿ ಫಾರ್ಮ್ಗೆ ರಿಲಾಯನ್ಸ್ ಫೌಂಡೇಷನ್ ಮತ್ತು ಸೇಡ್ಸಿ ಸಂಸ್ಥೆ ಸಹಯೋಗದಲ್ಲಿ ಅಧ್ಯಯನ ಪ್ರವಾಸ ಕೈಗೊಂಡ ಶಿಬಿರಾರ್ಥಿಗಳ ಕುರಿತು ಮಾತನಾಡಿ, ಹೈನುಗಾರಿಕೆ ಉದ್ಯಮ ಮಾಡಿ ಕುಟುಂಬದ ಆರ್ಥಿಕತೆ ಸುಧಾರಿಸುವ ಮೂಲಕ ವಲಸೆ ಹೋಗುವ ಯುವಕರಿಗೆ ಗ್ರಾಮದಲ್ಲೇ ಉದ್ಯೋಗ ನೀಡಿ, ಮಾದರಿಯಾಗಿದ್ದಾರೆ.
ರೈತ ನಾರಾಯಣರಾವ ಸುಣಗಾರ ಮಾದರಿ ರೈತರಾಗಿದ್ದು, ಇಂಥ ಪ್ರಗತಿಪರ ರೈತರ ಜಮೀನುಗಳಿಗೆ ಕ್ಷೇತ್ರ ಭೇಟಿ ನೀಡಿ, ಖುದ್ದಾಗಿ ಸ್ಥಳದಲ್ಲಿಯೇ ಎಲ್ಲ ಅನುಭವವನ್ನು ಪಡೆಯಬೇಕು. ಪುರಾತನ ಕಾಲದಿಂದಲೂ ಹೈನುಗಾರಿಕೆ ರೈತರ ಪಾಲನೆ, ಪೋಷಣೆ ಮಾಡುತ್ತಿದೆ. ಹೈನುಗಾರಿಕೆ ಸ್ವಾವಲಂಬಿ ಬದುಕು ನೀಡುತ್ತದೆ. ಜಿಲ್ಲೆಯ ರೈತರಿಗೆ ಉತ್ತಮ ವಾತಾವರಣವಿದೆ. ತಜ್ಞರ ಮಾಹಿತಿ ಪಡೆದು ಕೃಷಿ ಮಾಡಬೇಕು ಎಂದರು.
ಸೇಡ್ಸಿ ಸಂಸ್ಥೆ ತಜ್ಞ ಶ್ರೀನಿವಾಸ ಮಾತನಾಡಿ, ಪ್ರಗತಿಪರ ರೈತ ನಾರಾಯಣರಾವ ಸುಣಗಾರ ತಮ್ಮ ಜಮೀನಿನಲ್ಲಿ ಉತ್ತಮ ಶೆಡ್ ನಿರ್ಮಿಸಿ ೫೦ಕ್ಕಿಂತ ಹೆಚ್ಚಿನ ಮರ‍್ರಾ, ದೇಸಿ, ಜಾಫರ್ ಸೇರಿ ವಿವಿಧ ಎಮ್ಮೆಯ ತಳಿಗಳನ್ನು ಸಾಕಿ ನಿತ್ಯ ೫೦೦ಕ್ಕಿಂತ ಹೆಚ್ಚು ಲೀಟರ್ ಹಾಲು ಮಾರಾಟ ಮಾಡಿ, ಅಧಿಕ ಆದಾಯ ಗಳಿಸುತ್ತಿದ್ದಾರೆ. ಹಳ್ಳಿಯಲ್ಲೇ ಉಳಿದು ಉತ್ತಮ ಸಾಧನೆ ಮಾಡಬಹುದು ಎಂದರು.
ವೈದ್ಯ ಡಾ.ಎಸ್.ಎಸ್.ಹಿರೇಮಠ ಮಾತನಾಡಿ, ಗುಣಮಟ್ಟದ ಹಾಲು ಉತ್ಪಾದನೆ, ಸಂಗ್ರಹಣೆ, ಸಂಸ್ಕರಣೆ ಮತ್ತು ಹಾಲಿನ ಉತ್ಪನ್ನಗಳ ಮೂಲಕ ಜಿ¯್ಲÉಯ ರೈತರು ಹೈನುಗಾರಿಕೆಯಿಂದ ಉತ್ತಮ ಲಾಭ ಪಡೆಯಬಹುದು. ಹೈನುಗಾರಿಕೆ ಬಲಪಡಿಸಲು ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಹಗಲಿರುಳು ಶ್ರಮಿಸುತ್ತಿವೆ ಎಂದರು.
ರೈತ ನಾರಾಯಣರಾವ ಸುಣಗಾರ ಮಾತನಾಡಿ, ಜಾನುವಾರುಗಳಲ್ಲಿ ಕಾಣಿಸುವ ಕಾಲುಬಾಯಿ, ಬಂಜೆತನ, ಕೆಚ್ಚಲು ಊತ, ಮೊಲೆ ದ್ವಾರ ಮುಚ್ಚಿ ಹೋಗುವುದು, ಕೆಚ್ಚಲಬಾವು, ಆಜೀರ್ಣತೆ, ಹೊಟ್ಟೆ ಉಬ್ಬರ, ಅಲರ್ಜಿ ಅಥವಾ ವಿಷ ಹುಳುವಿನ ಕಡಿತ, ಮಂಡಿ ಊತ, ಹಾಲಿನಲ್ಲಿ ರಕ್ತ, ಅತಿಸಾರ, ಜ್ವರ, ಚರ್ಮದ ಗಂಟು ಇತರ ರೋಗಗಳಿಗೆ ನಾಟಿ ಔಷಧ ಸಿದ್ಧಪಡಿಸಿ, ನೀಡಬೇಕು. ಅವುಗಳನ್ನು ನೀಡುವ ಮಾಹಿತಿ ಒದಗಿಸಿದರು.
ಪ್ರಮುಖರಾದ ಸಂಗಪ್ಪ ಅತಿವಾಳ, ಮಹೇಶ ಕಣಜೆ, ಸುನೀಲ್, ಕೃಷ್ಣ, ಬಸವರಾಜ, ಸಂತೋಷ, ಶ್ಯಾಮ, ಪ್ರೇಮ, ಮಧುಕರ, ರಾಜಕುಮಾರ, ಇಂದುಮತಿ, ನಿರ್ಮಲ, ಮಹಾದೇವಿ, ಶಾಂತಾಬಾಯಿ, ಜಗದೇವಿ, ಸರಸ್ವತಿ, ಜಯಶ್ರೀ, ಮಲ್ಲಿಕಾರ್ಜುನ ದೇವಪ್ಪ, ರೇವಣಸಿದ್ದಪ್ಪ ಜಾಡರ್, ಅಮಿತ್, ಮನ್ಮಥ, ಧನರಾಜ, ಬಾಲಾಜಿ ಮೇತ್ರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net