

ಕಂಪ್ಲಿ: ಆರ್ಥಿಕ ಸ್ವಾವಲಂಬನೆಯಲ್ಲಿ ಪಶು ಸಂಗೋಪನೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಶಾಂತಲಾ ಹೇಳಿದರು.
ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಪಶು ಸಂಗೋಪನೆ ಚಟುವಟಿಕೆಗಳ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ಕೃಷಿಯೊಂದಿಗೆ ಪಶು ಸಂಗೋಪನೆ ಅಳವಡಿಸಿಕೊಂಡಲ್ಲಿ ಸಾವಯವ ಕೃಷಿಗೆ ಅನುಕೂಲವಾಗುತ್ತದೆ. ಹೈನುಗಾರಿಕೆಯಿಂದ ಸಾಕಷ್ಟು ಆದಾಯ ಗಳಿಸಲು ಸಾಧ್ಯ ಎಂದರು.
ಹಿರಿಯ ಪಶು ವೈದ್ಯ ಪರೀಕ್ಷಕ ಶಿವಣ್ಣ ವಿ.ದೇವಕ್ಕಿ, ಸಾವಯವ ಕೃಷಿಕ ಬಸವರಾಜಸ್ವಾಮಿ ಪಶು ಸಂಗೋಪನೆ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕಿ ವಿದ್ಯಾವತಿ ಹೊಸಮನಿ, ನಾಜನೀನ ನದಾಫ್, ಕೃಷಿ ಅಧಿಕಾರಿಗಳಾದ ಕೆ.ಯೇಸುಬಾಬು, ನವ್ಯ ಪ್ರಶಾಂತ್, ಶಿವಪ್ಪ ಬಾರಿಗಿಡದ ಇತರರಿದ್ದರು.