ಹೈನುಗಾರಿಕೆಯಲ್ಲಿ ಹೆಚ್ಚಿನ ಆದಾಯ ಗಳಿಸಿ

21-GPT-2
ಗುಂಡ್ಲುಪೇಟೆ ತಾಲೂಕಿನ ಮಾದಾಪಟ್ಟಣ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಎಂ.ಪಿ.ಸುನಿಲ್ ಉದ್ಘಾಟಿಸಿದರು.
Published on

ಗುಂಡ್ಲುಪೇಟೆ: ರೈತರು ಹೈನುಗಾರಿಕೆಯಲ್ಲಿ ಗುಣಮಟ್ಟದ ಹಾಲು ಉತ್ಪಾದಿಸುವ ಮೂಲಕ ಹೆಚ್ಚಿನ ಆದಾಯಗಳಿಸಬೇಕು ಎಂದು ಚಾಮುಲ್ ನಿರ್ದೇಶಕ ಎಂ.ಪಿ.ಸುನಿಲ್ ಸಲಹೆ ಹೇಳಿದರು.

ತಾಲೂಕಿನ ಮಾದಾಪಟ್ಟಣ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಒಕ್ಕೂಟವು ಹೈನುಗಾರರ ಹಿತಾಸಕ್ತಿ ಕಾಪಾಡಲು ಹಲವಾರು ಯೋಜನೆಗಳನ್ನು ಒದಗಿಸುತ್ತಿದೆ. ಜಾನುವಾರುಗಳ ಆರೋಗ್ಯ ತಪಾಸಣೆ ಹಾಗೂ ವಿಮೆ, ಉತ್ಪಾದಕರಿಗೆ ಯಶಸ್ವಿನಿ ಯೋಜನೆಯ ಸೌಲಭ್ಯ, ಹೈನುಗಾರಿಕೆ ಉದ್ಯಮ ಮಾಡಿಕೊಳ್ಳುವವರಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುತ್ತಿದ್ದು, ಇವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಸಂಘವು ಪ್ರಸ್ತುತ ಸಾಲಿನಲ್ಲಿ 2 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, 93 ಸಾವಿರ ರೂ.ಗಳನ್ನು ಬೋನಸ್ ರೂಪದಲ್ಲಿ ವಿತರಿಸಲಿದೆ ಎಂದರು. ಸಂಘದ ಅಧ್ಯಕ್ಷ ಜಿ.ಮಹದೇವಸ್ವಾಮಿ, ಉಪಾಧ್ಯಕ್ಷ ಬಸವೇಗೌಡ, ನಿರ್ದೇಶಕರಾದ ಶಿವಮಲ್ಲಪ್ಪ, ಬಸವರಾಜು, ಮಂಗಳಮ್ಮ, ಮಹೇಶ್ವರಿ, ಮುಖ್ಯಕಾರ್ಯನಿರ್ವಾಹಕ ಮಲ್ಲೇಶ್ ಹಾಗೂ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net