

ಅರಕಲಗೂಡು: ಆರ್ಥಿಕವಾಗಿ ಹಿಂದುಳಿದ ಬಡಕುಟುಂಬಗಳಿಗೆ ಹೈನುಗಾರಿಕೆ ಕೈಗೊಳ್ಳಲು ನೆರವು ನೀಡುವ ಮೂಲಕ ಅರಕಲಗೂಡು ರೋಟರಿ ಮಿಡ್‌ಟೌನ್ ಉತ್ತಮ ಕಾರ್ಯ ಮಾಡಿದೆ ಎಂದು ರೋಟರಿ ಫೌಂಡೇಷನ್ ಮುಖ್ಯಸ್ಥ ಡಾ. ಪಿ. ನಾರಾಯಣ್ ತಿಳಿಸಿದರು.
ಪಟ್ಟಣದ ಹೊರವಲಯದ ಡಿಕೆ ಕನ್ವೆನ್‌ಷನ್ ಹಾಲ್‌ನಲ್ಲಿ ಏರ್ಪಡಿಸಿದ್ದ ಗೋದಾನ ಯೋಜನೆಯಲ್ಲಿ ಹಸುಗಳ ವಿತರಣೆ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಡತನದ ರೇಖೆಗಿಂತ ಕೆಳಗಿರುವ 65 ಜನರು ಹೈನುಗಾರಿಕೆ ಮೂಲಕ ಬದುಕು ಕಟ್ಟಿ ಕೊಳ್ಳಲು ನೆರವಾಗುವ ಉದ್ದೇಶದಿಂದ ಹಸುಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಅಮೆರಿಕ ದೇಶದ ಗ್ರಾಮವೊಂದರ ರೋಟರಿ ಸದಸ್ಯರು ಇದಕ್ಕೆ ಧನಸಹಾಯ ನೀಡಿದ್ದಾರೆ. ಫಲಾನುಭವಿಗಳು ಇದರ ಉಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕು. ಅರಕಲ ಗೂಡು ರೋಟರಿ ಘಟಕ ತನ ಸಾಮಾಜಿಕ ಕಾರ್ಯಗಳ ಮೂಲಕ ರೋಟರಿ ವಲಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದು ತಿಳಿಸಿದರು.
ರೋಟರಿ ಘಟಕದ ಅಧ್ಯಕ್ಷ ಬಿ.ಸಿ. ಶಶಿಧರ್ ಮಾತನಾಡಿ, ರೋಟರಿ ಸಂಸ್ಥೆ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಂದಿಲ್ರೆ ್ಲಂದು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಜಿಲ್ಲಾ ಪ್ರಾಂತಪಾಲ ಎಂ.ಜಿ. ರಾಮಚಂದ್ರಮೂರ್ತಿ, ಸಹಾಯಕ ಪ್ರಾಂತಪಾಲರಾದ ಡಾ. ಬಿ.ಎಸ್. ಪ್ರೀತಿ ಮೋಹನ್, ರೋಟರಿ ಘಟಕದ ಅಧ್ಯಕ್ಷ ಬಿ.ಸಿ. ಶಶಿಧರ್ ಮಾತನಾಡಿದರು. ಪಶು ಪಾಲನಾ ಇಲಾಖೆ ಸಹಾ ಯಕ ನಿರ್ದೇಶಕ ಡಾ. ದಿಲಿಪ್, ಜೋನಲ್ ಲೆಪ್ಟಿನೆಂಟ್ ಎಸ್.ಎನ್ ಶಿವಕುಮಾರ್, ಮಾಜಿ ಲೆಪ್ಪಿನೆಂಟ್ ಡಾ. ಸ್ವಾಮಿಗೌಡ, ಕಾರ್ಯದರ್ಶಿ ಶ್ರೀಧರ್‌ಪ್ರಭು ಇದ್ದರು.