ಹೈನುಗಾರರಿಗೆ ಇನ್ನಷ್ಟು ಸವಲತ್ತು ಭರವಸೆ

20 yelandur 01 A
Published on

ಯಳಂದೂರು: ಜಿಲ್ಲೆಯ ಹೈನುಗಾರರಿಗೆ ಚಾಮುಲ್ ವತಿಯಿಂದ ಇನ್ನಷ್ಟು ಸವಲತ್ತುಗಳನ್ನು ನೀಡಲು ಕ್ರಮ ವಹಿಸಲಾಗುವುದು ಎಂದು ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ ತಿಳಿಸಿದರು.
ಅವರು ಬುಧವಾರ ಪಟ್ಟಣದ ಶ್ರೀ ಶಂಕರ ಸಭಾ ಭವನದಲ್ಲಿ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು, ಸಿಇಒಗಳಿಗೆ ಹಮ್ಮಿಕೊಂಡಿದ್ದ ಆಡಳಿತ ನಿರ್ವಹಣೆ ಬಗೆಗಿನ ಒಂದು ದಿನದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಹೈನುಗಾರರಿಗೆ ಚಾಮುಲ್ ವತಿಯಿಂದ ಈಗಾಗಲೇ ಅನೇಕ ಸೌಲಭ್ಯಗಳನ್ನು ನೀಡಲಾಗಿದೆ. ಗುಣಮಟ್ಟದ ಹಾಲು ಪೂರೈಕೆಗೆ ಜಾಗೃತಿ ಮೂಡಿಸಲಾಗಿದೆ. ಇದರೊಂದಿಗೆ ಹೈನುಗಾರರಿಗೆ ಹಾಲಿನ ದರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚರ್ಚಿಸಿ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದರು.
ಕೆಎಂಎಫ್‌ನ ನಿವೃತ್ತ ಹಿರಿಯ ಉಪನಿರ್ದೇಶಕ ಆರ್. ರಾಜಣ್ಣ ಹಾಲಿನ ಗುಣಮಟ್ಟದ ಸುಧಾರಣೆಗಾಗಿ ಅನುಸರಿಸಬೇಕಾದ ವಿಷಯ ಕುರಿತು ಉಪನ್ಯಾಸ ನೀಡಿದರು. ಮೈಸೂರು ಕೆಐಸಿಎಂ ಉಪನ್ಯಾಸಕ ಮಹದೇವಪ್ಪ ಆಡಳಿತ ಮಂಡಳಿ ಕರ್ತವ್ಯ ಮತ್ತು ಜವಾಬ್ದಾರಿಗಳು ಹಾಗೂ ಸಹಕಾರ ಕಾಯ್ದೆ ಮತ್ತು ಕಾನೂನು ಎಂಬ ವಿಷಯದ ಬಗ್ಗೆ ಚಾಮುಲ್‌ನ ಸಹಾಯಕ ವ್ಯವಸ್ಥಾಪಕ ಜಿ.ಪ್ರಭು ಪಶು ಆಹಾರ ಮತ್ತು ಹಸಿರು ಮೇವಿನ ಬಗ್ಗೆ ಉಪನ್ಯಾಸಗಳನ್ನು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net