ಹೈಟೆಕ್ ಮೀನು ಮಾರುಕಟ್ಟೆಗೆ ರಸ್ತೆ ಸಿದ್ಧ

IMG-20230923-WA0021
Published on

ಯಾದಗಿರಿ: ನಗರದಲ್ಲಿ ತಲೆ ಎತ್ತಿರುವ ಹೈಟೆಕ್ ಮೀನು ಮಾರುಕಟ್ಟೆ ಸಿದ್ದಗೊಂಡಿದ್ದು, ಸಿಸಿ ರಸ್ತೆ ಪೂರ್ಣಗೊಂಡಿದ್ದು, ಇದೀಗ ಮೀನು ಮಾರಾಟ ಸ್ಥಳಾಂತರ ಮಾಡುವ ಸೋಮವಾರ ಸಭೆ ಕರೆಯಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ತಿಳಿಸಿದ್ದಾರೆ.

ಚರಂಡಿ ಕಾಮಗಾರಿ ಭರದಿಂದ ಸಾಗಿದ್ದನ್ನು ವೀಕ್ಷಿಸಿದ ನಂತರ ಹೇಳಿಕೆ ನೀಡಿರುವ ಅವರು, ಇದೇ ಸೋಮವಾರ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಮೀನು ಮಾರಾಟವನ್ನು ಶಾಸ್ತ್ರಿ ವೃತ್ತದ ಬಳಿಯಿಂದ ಮಾರುಕಟೆಗೆ ಸ್ಥಳಾಂತರ ಮಾಡುವ ದಿನಾಂಕ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.

ಇದಲ್ಲದೇ ಸಿಸಿರಸ್ತೆ ಹಾಗೂ ಚರಂಡಿಗಳ ನಿಮರ್ಾಣ ನನೆಗುದಿಗೆ ಬಿದ್ದಿದ್ದರಿಂದ ಮತ್ತೆ ಹೋರಾಟ ಮಾಡುವ ಮೂಲಕ ಈದೀಗ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ಹಾಗೂ ವಿದ್ಯುತ್ ದೀಪ ಕಂಬಗಳು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಸಕರ್ಾರ ಹಣ ವ್ಯಯಿಸಿ ಕಾಮಗಾರಿಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.

ನಿರಂತರ ಹೋರಾಟದ ಪ್ರತಿಫಲವಾಗಿ ಹೈಟೆಕ್ ಮೀನು ಮಾರಾಟ ಮಳಿಗೆ ಲಭಿಸಿದ್ದು ಇದರ ಸೌಲತ್ತು ಪಡೆಯಬೇಕೆಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.ಈದೀಗ ನಾಡಿದ್ದು ಸೋಮವಾರದ ಸಭೆಯಲ್ಲಿ ಮೀನು ಮಾರುಕಟ್ಟೆ ಸ್ಥಳಾಂತರ ಮಾಡುವ ದಿನಾಂಕ ನಿಗದಿಪಡಿಸಲು ಕೋಲಿವಾಡದ ದೇವಿ ಗುಡಿಯಲ್ಲಿಸಭೆ ಕರೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net