ಹೈಟೆಕ್‌ ಅಂಗನವಾಡಿ ಕಟ್ಟಡಕ್ಕೆ ಅನುದಾನ ಮಂಜೂರ

11-33
ಯಮಗರ್ಣಿ ಗ್ರಾಮದ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಮ್ಯಾಗ್ನಂ ಟಫ್ ಕಂಪೆನಿಯ ಎಂ.ಡಿ ಬಸವಪ್ರಸಾದ ಜೊಲ್ಲೆ ಭೂಮಿಪೂಜೆ ನೆರವೇರಿಸಿದರು. ಅವಿನಾಶ ಪಾಟೀಲ, ಸಾಗರ ದೇಸಾಯಿ, ಅರ್ಚನಾ ಚವ್ಹಾಣ, ಸಂತೋಷ ಚವ್ಹಾಣ ಇತರರಿದ್ದರು.
Published on

ನಿಪ್ಪಾಣಿ, ಬೆಳಗಾವಿ: ಸಚಿವೆ ಶಶಿಕಲಾ ಜೊಲ್ಲೆ ತಮ್ಮ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಮ್ಯಾಗ್ನಂ ಟಫ್‌ನ ವ್ಯವಸ್ಥಾಪಕ ನಿರ್ದೇಶಕ ಬಸವಪ್ರಸಾದ ಜೊಲ್ಲೆ ಹೇಳಿದರು.
ತಾಲೂಕಿನ ಯಮಗರ್ಣಿ ಗ್ರಾಮ ಬೀಡಿ ಕಾಲನಿಯಲ್ಲಿ ಅನುಮೋದನೆಗೊಂಡ ನೂತನ ಹೈಟೆಕ್ ಅಂಗನವಾಡಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅಡಿಗಲ್ಲು ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಅಂಗನವಾಡಿ ಹೈಟೆಕ್ ಕಟ್ಟಡಕ್ಕೆ 11ಲಕ್ಷ ರೂ. ಅನುದಾನ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ 5 ಲಕ್ಷ ರೂ. ಅನುದಾನವನ್ನು ಸಚಿವೆ ಜೊಲ್ಲೆ ಕಲ್ಪಿಸಲಿದ್ದಾರೆ ಎಂದು ತಿಳಿಸಿದರು. ಗ್ರಾಪಂ ಉಪಾಧ್ಯಕ್ಷ ಪ್ರವೀಣ ಕಾಂಬಳೆ, ಸದಸ್ಯ ನಾಸೀರಖಾನ್ ಇನಾಮದಾರ್, ಅರ್ಚನಾ ಚವ್ಹಾಣ, ಉಮೇಶ ಪವಾರ, ಸಾಗರ ದೇಸಾಯಿ, ಸೋಮರಾಯ ಪಿಸೂತ್ರೆ, ಅಂಕುಶ ಕುಂಬಾರ, ಸಂತೋಷ ಚವ್ಹಾಣ, ವಿಜಯ ಯಾದವ, ಗಜಬರ ಮಕಾನದಾರ, ಹಾಲಶುಗರ್ಸ್‌ ಕಾರ್ಖಾನೆ ನಿರ್ದೇಶಕ ಅವಿನಾಶ ಪಾಟೀಲ, ಸಾಗರ ಚೆಂಡಕೆ, ಸುನೀಲ ಸಂಕಪಾಳ, ಅರುಣ ಪವಾರ, ರಾಜು ಸುತಾರ, ರಘುನಾಥ ಮಗದುಮ್ಮ, ಸರ್ಜೇರಾವ ಮಗದುಮ್ಮ, ಶಂಕರ ಶಿರಗಾವೆ, ಸುಧೀರ ಸರನಾಯಿಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net